ಮಂಗಳೂರು, ಅ.21 (DaijiworldNews/AK): ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಶ್ರದ್ಧಾಂಜಲಿಯೊಂದಿಗೆ ಆಚರಿಸಲಾಯಿತು. ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ 7ನೇ ಪಡೆ ಕೆಎಸ್ಆರ್ಪಿ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.


ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, 7ನೇ ಪಡೆ ಕೆಎಸ್ಆರ್ಪಿ (KSRP) ಮತ್ತು ವಿಶೇಷ ಕಾರ್ಯಪಡೆ ಘಟಕಗಳ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ತವ್ಯದ ವೇಳೆ ಪ್ರಾಣತ್ಯಾಗ ಮಾಡಿದ ವೀರ ಪೊಲೀಸ್ ಹುತಾತ್ಮರ ಸ್ಮರಣೆಗಾಗಿ ಪುಷ್ಪಚಕ್ರವಿಟ್ಟು ಗೌರವ ನಮನ ಸಲ್ಲಿಸಲಾಯಿತು ಮತ್ತು ಮೌನಾಚರಣೆ ಮಾಡಲಾಯಿತು.