ಮಂಗಳೂರು, ಅ.21 (DaijiworldNews/TA): ಕುಲಶೇಖರದ ಐಕಾನ್ ಫಿಟ್ನೆಸ್ ಕ್ಲಬ್ ನಲ್ಲಿ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆಯುಧ ಪೂಜೆಯ ಅಂಗವಾಗಿ ಜಿಮ್ ನ ಉಪಕರಣಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಶುಭ ಹಾರೈಸಲಾಯಿತು.


ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಬಳ್ಳಾಲ್ಭಾಗ್ ನ ವಿವೇಕ್ ಟೈಗರ್ಸ್ ತಂಡದಿಂದ ಹುಲಿವೇಷ ನೃತ್ಯ ಪ್ರದರ್ಶನ ನಡೆಯಿತು. ಹುಲಿವೇಷದ ಸೊಗಸಾದ ಹೆಜ್ಜೆಗಳು ಹಾಗೂ ಕಲಾವಿದರ ಉತ್ಸಾಹಭರಿತ ಪ್ರದರ್ಶನ ನೆರೆದವರ ಗಮನ ಸೆಳೆಯಿತು. ಐಕಾನ್ ಫಿಟ್ನೆಸ್ ಕ್ಲಬ್ನ ಪ್ರೊಪ್ರೈಟರ್ ಜಾನೆಟ್ ಸಂತೋಷ್ ಪಡಲ್ಕರ್, ಮಾಲೀಕ ಸಂತೋಷ್ ಪಡಲ್ಕರ್, ಆಡಳಿತಾಧಿಕಾರಿ ಶರೋನ್ ಪಡಲ್ಕರ್, ಮ್ಯಾನೇಜರ್ ಅಶ್ವಿನ್ ನೊರೊನ್ಹಾ ಹಾಗೂ ಜಿಮ್ನ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.