ಸುಳ್ಯ, ಅ.11 (DaijiworldNews/TA): ದಸರಾ ಹಬ್ಬದ ಹಿನ್ನೆಲೆಯಲ್ಲಿ ಶಾಂತಿ ಮತ್ತು ಕಾನೂನು ಸೂವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸುಳ್ಯ ನಗರದ ಮುಖ್ಯಬೀದಿಯಲ್ಲಿ ಪೊಲೀಸ್ ಇಲಾಖೆ ಮತ್ತು ವಿಶೇಷ ಕಾರ್ಯಪಡೆ ವತಿಯಿಂದ ಶನಿವಾರ ಪಥಸಂಚಲನ ನಡೆಯಿತು.

ಈ ಸಂದರ್ಭ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ತಿಮ್ಮಪ್ಪ ನಾಯ್ಕ, ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಉದಯರವಿ, ವಿಶೇಷ ಕಾರ್ಯಪಡೆ ವಿಭಾಗದ ಉಪನಿರೀಕ್ಷಕರಾದ ಮಂಜು ಬಿಲ್ಲವ, ಕೆಎಸ್ಆರ್ ಪಿ ವಿಭಾಗದ ಉಪನಿರೀಕ್ಷಕರಾದ ಹರೀಶ್ ಸಿ ಎಚ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡು ಗಾಂಧಿನಗರ ಪೆಟ್ರೋಲ್ ಬಂಕ್ ವರೆಗೆ ಪಥಸಂಚಲನ ನಡೆಯಿತು.