ಮಂಗಳೂರು, ಅ.06 (DaijiworldNews/AA): ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಇದರ 36ನೇ ವಾರ್ಷಿಕ ಮಹಾಸಭೆಯು ಭಾನುವಾರ ಮಂಗಳೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ ಹಾಲ್ ಬೆಂದೂರ್ವೆಲ್ನ ಮಾಜಿ ಜಿಲ್ಲಾ ಸಂಚಾಲಕರಾದ ದಿವಂಗತ ನವೀನ್ ಕುದ್ರೋಳಿ ವೇದಿಕೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ ಬೆಂಗಳೂರು(ಕೆಪಿಎ) ಇದರ ಅಧ್ಯಕ್ಷ ಎಚ್. ಎಸ್. ನಾಗೇಶ್ ಅವರು, "ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ರಾಜ್ಯಕ್ಕೆ ಮಾದರಿ ಸಂಘಟನೆ. ತಮ್ಮ ಶಿಸ್ತು, ಸಮಯ ಪಾಲನೆ, ಕಾರ್ಯಕ್ರಮದ ಅಚ್ಚುಕಟ್ಟು ರಾಜ್ಯದ ಎಲ್ಲಾ ತಾಲೂಕು, ಜಿಲ್ಲಾ ಸಂಘಗಳಿಗೆ ಮಾದರಿಯಾಗಿದೆ" ಎಂದರು.
ಜಿಲ್ಲಾಧ್ಯಕ್ಷ ನವೀನ್ ರೈ ಪುತ್ತೂರು ಎಲ್ಲರನ್ನೂ ಸ್ವಾಗತಿಸಿ, ಸಭಾಧ್ಯಕ್ಷತೆ ವಹಿಸಿ ವೃತ್ತಿಯಲ್ಲಿ ಬರುವ ಸವಾಲುಗಳನ್ನು ಹೇಗೆ ಎದುರಿಸುವುದು ಮತ್ತು ತಂತ್ರಜ್ಞಾನ ಮುಖೇನವಾಗಿ ಬರುವ ಛಾಯಾಗ್ರಹಣವನ್ನು ಹೇಗೆ ವೃದ್ಧಿಪಡಿಸಿಕೊಳ್ಳಬೇಕು? ಎಸ್ಕೆಪಿಎ ಸದಸ್ಯರು ಮರಣ ಹೊಂದಿದಾಗ ಅವರಿಗೆ ಕೂಡಲೇ ದೊಡ್ಡಮೊತ್ತದ ಪರಿಹಾರಧನ ನೀಡುವ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಕಳೆದ 35 ವರ್ಷಗಳ ಹಿಂದೆ ಹಿರಿಯರು ಸ್ಥಾಪಿಸಿದ ಸಂಘವನ್ನು ಮುನ್ನಡೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಗ್ಗಟ್ಟು, ಪ್ರೀತಿ ವಿಶ್ವಾಸದಿಂದ ನಾವೆಲ್ಲರೂ ಒಂದಾಗಿ ಸಂಘಟನೆಯನ್ನು ಮುನ್ನಡೆಸುವ ಹೆಜ್ಜೆಯನಿಡಬೇಕು ಎಂದು ಹೇಳಿದರು.
ಜಿಲ್ಲಾ ಸಂಚಾಲಕರಾದ ಗೋಪಾಲ್ ಸುಳ್ಯ, ಸೌತ್ ಕೆನರಾ ಫೋಟೋಗ್ರಾಫರ್ಸ್ ವಿವಿಧೋದ್ದೇಶ ಸಹಕಾರ ಸಂಘ ಇದರ ಅಧ್ಯಕ್ಷರಾದ ಕೆ. ವಾಸುದೇವ ರಾವ್, ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್ ಎನ್. ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಕೋಶಾಧಿಕಾರಿ ಹೆರಿಕ್ ಡಿಸೋಜ ಉಪಾಧ್ಯಕ್ಷರುಗಳಾದ ದೇವರಾಜ್ ಶೆಟ್ಟಿ ಸುರತ್ಕಲ್, ದತ್ತಾತ್ರೇಯ ಕಾರ್ಕಳ, ಜಿಲ್ಲಾ ಸಲಹಾ ಸಮಿತಿ ಸದಸ್ಯರುಗಳಾದ ವಿಠಲ ಚೌಟ, ಕೀರ್ತಿ ಮಂಗಳೂರು, ಕರುಣಾಕರ್ ಕಾನಂಗಿ, ಜಗನ್ನಾಥ ಶೆಟ್ಟಿ, ವಿಲ್ಸನ್ ಗೋನ್ಸಾಲ್ವಿಸ್, ಶ್ರೀಧರ್ ಶೆಟ್ಟಿಗಾರ್, ಪದ್ಮಪ್ರಸಾದ್ ಜೈನ್, ಜಿಲ್ಲಾ ಸಮಿತಿ ಸದ್ಯರಾದ ಹರೀಶ್ ಪಿ. ಕೋಟ್ಯಾನ್, ಅಮೃತ್ ಬೀಜಾಡಿ, ಹರೀಶ್ ಕುಂದರ್, ಪ್ರಕಾಶ್ ಶೇರಿಗಾರ್, ಸುರೇಶ್ ಕೌಡಂಗೆ, ಲೋಕೇಶ್ ಬಿ.ಎನ್., ಚಿದಾನಂದ ಎ, ರವಿ ಕೋಟ್ಯಾನ್, ರಾಜೇಶ್ ಶಂಕರ್ಪುರ, ೧೪ ವಲಯದ ಅಧ್ಯಕ್ಷರುಗಳಾದ ಬಾಲಕೃಷ್ಣ ಶೆಟ್ಟಿ (ಕುಂದಾಪುರ ಬೈಂದೂರು) ಆಲ್ವಿನ್ ಅಂದ್ರಾದೆ (ಬ್ರಹ್ಮಾವರ) ದಿವಾಕರ್ (ಉಡುಪಿ) ಸಂತೋಷ್ ಕಾಪು (ಕಾಪು) ಪ್ರಮೋದ್ ಪೈ (ಕಾರ್ಕಳ) ಪ್ರಶಾಂತ್ ಶೆಟ್ಟಿ (ಮಂಗಳೂರು) ಶ್ರೀನಿವಾಸ್ ಬಪ್ಪನಾಡು(ಮುಲ್ಕಿ) ನಿತಿನ್ ಬೆಳುವಾಯಿ (ಮೂಡಬಿದ್ರಿ) ಶಶಿಕಾಂತ್ ಗೌಡ (ಸುಳ್ಯ) ಜಯಂತ್ ಗೌಡ (ಪುತ್ತೂರು) ರಾಜೇಂದ್ರ ಕೆ. (ಬಂಟ್ವಾಳ) ರವಿ ನಾರಾವಿ (ಬೆಳ್ತಂಗಡಿ) ರಾಜೇಶ್ ಉಳ್ಳಾಲ (ಉಳ್ಳಾಲ) ದೇವಿ ಪ್ರಸಾದ್ ಶೆಟ್ಟಿ (ಸುರತ್ಕಲ್) ಗೌರವ ಉಪಸ್ಥಿತಿಯಾಗಿ ವೇದಿಕೆಯಲ್ಲಿ ಇದ್ದರು.
ದ್ವಜಾರೋಹಣವನ್ನು ಎಸ್.ಕೆ.ಪಿ.ಎ. ಸ್ಥಾಪಕ ಸದಸ್ಯರುಗಳಾದ ವಿಠಲ್ ಚೌಟ ಹಾಗೂ ಕೀರ್ತಿ ಮಂಗಳೂರು ನೆರವೇರಿಸಿದರು. ಛಾಯಾ ವಸ್ತು ಪ್ರದರ್ಶನದ ಮಳಿಗೆಯ ಉದ್ಘಾಟನೆಯನ್ನು ಜಿಲ್ಲಾ ಸಂಚಾಲಕರಾದ ಗೋಪಾಲ್ ಸುಳ್ಯ ನೇರವೆರಿಸಿದರು. ಛಾಯಾಗ್ರಹಣ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ವಿಜೇತ ಸದಸ್ಯರಾದ ಉಡುಪಿಯ ಆಸ್ಟ್ರೋ ಮೋಹನ್, ಸಂಘಟಣೆಯ ಹಿರಿಯ ಸದಸ್ಯರಾದ ಕಾಪು ವಿವೇಕ್ ಬಳ್ಳಾಲ್, ಪುತ್ತೂರು ಶಾಂತರಾಮ್ ಶೈನಿ ಸ್ಟುಡಿಯೋ ಅವರನ್ನು ಸನ್ಮಾನಿಸಲಾಯಿತು. ಕೆ.ಪಿ.ಎ ಛಾಯಾ ಭೂಷಣ ಪ್ರಶಸ್ತಿ ಪುರಸ್ಕೃತರಾದ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರ್ಷಾಕರ್ ಅವರನ್ನು ಅಭಿನಂದಿಸಲಾಯಿತು.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಸದಸ್ಯರಗಳದ ಮೂಡಬಿದಿರೆಯ ರವಿ ಕೋಟ್ಯಾನ್, ಕುಂದಾಪುರ ಜಾವೇದ್ ಅಕ್ತರ್, ಉಡುಪಿ ನಿಧೀಶ್ ಮತ್ತು ಪ್ರಸಾದ್ ಜತ್ತನ್ನ, ಬ್ರಹ್ಮಾವರ ಪ್ರದೀಪ್ ಉಪ್ಪೂರು, ಮಂಗಳೂರು ಸಾಗರ್ ದೇವಾಡಿಗ ಅವರನ್ನು ಗುರುತಿಸಲಾಯಿತು.
ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ಹಾಗೂ ವಿದ್ಯಾಸ್ಫೂರ್ತಿ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ಶಾಲು ಸ್ಮರಣಿಕೆ ನೀಡಿ ಗುರುತಿಸಲಾಯಿತು. ಜಿಲ್ಲಾ ಉಪಾಧ್ಯಕ್ಷ ದೇವರಾಜ್ ಶೆಟ್ಟಿ ವಿದ್ಯಾನಿಧಿ ವಿಜೇತರ ಪಟ್ಟಿಯನ್ನು ವಾಚಿಸಿದರು.
ಜಿಲ್ಲೆಯ ವಲಯ ಪ್ರಶಸ್ತಿಯನ್ನು ಪ್ರಥಮಸ್ಥಾನ ಬಂಟ್ವಾಳ, ದ್ವಿತೀಯಸ್ಥಾನ ಕಾಪು ಹಾಗೂ ತ್ರತೀಯ ಸ್ಥಾನವನ್ನು ಬೆಳ್ತಂಗಡಿ ವಲಯ ಪಡೆದುಕೊಂಡಿದೆ. ನಂತರ ವಲಯಗಳ ವಾರ್ಷಿಕ ಚಂದವನ್ನು 14 ವಲಯಗಳಿಗೆ ಹಸ್ತಾಂತರಿಸಲಾಯಿತು. ನಮ್ಮ ಸಂಘಟನೆಯ ಅಧಿಕೃತ ವೆಬ್ಸೈಟ್ ಹಾಗೂ ಇನ್ಸ್ಟಾಗ್ರಾಂ ಖಾತೆ ಅನಾವರಣಗೊಳಿಸಲಾಯಿತು.
ಗತ ವಾರ್ಷಿಕ ವರದಿ ಸುರೇಶ್ ಕೌಡಂಗೆ, ಆಯ ವ್ಯಯವನ್ನು ಜಿಲ್ಲಾ ಕೋಶಾಧಿಕಾರಿ ಹೆರಿಕ್ ಡಿಸೊಜ, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್ ಕ್ರೀಡಾ ವರದಿ, ವಾರ್ಷಿಕ ವರದಿಯನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಅಮೃತ್ ಬೀಜಾಡಿ ವಾಚಿಸಿದರು. ರಾಘವೇಂದ್ರ ಉಡುಪಿ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೇಯ ಕಾರ್ಕಳ ವಂದಿಸಿ, ನವೀನ್ ಬಂಗೇರ ಪ್ರಾರ್ಥಿಸಿದರು.