ಮಂಗಳೂರು, ಅ.05 (DaijiworldNews/AK) : 2026 ಜೂನ್ ತಿಂಗಳಿಂದ ಬಾಕಿ ಇರುವ ಮಾಸಿಕ ಗೌರವ ಧನವನ್ನು ವಿತರಿಸಬೇಕೆಂದು ಒತ್ತಾಯಿಸಿ ಮಂಗಳೂರು ಮಿನಿ ವಿಧಾನ ಸೌಧದ ಮುಂದುಗಡೆ CITU ನೇತ್ರತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಾಮೂಹಿಕ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಗೌರವ ಅಧ್ಯಕ್ಷರಾದ ಪದ್ಮಾವತಿ ಶೆಟ್ಟಿಯವರು ಮಾತನಾಡಿದರು.ಅವರು ಮಾತನಾಡುತ್ತಾ ನೀಡುವ ನಿಕ್ರಷ್ಣ ವೇತನವನ್ನು ಕೂಡಾ ನೀಡದಿರುವ ಸರಕಾರಗಳ ನೀತಿಗಳ ವಿರುದ್ದ ಹೋರಾಟ ನಡೆಸುವ ಸ್ಥಿತಿ ಆತಂಕಕಾರಿಯಾಗಿದೆ.ಕೂಡಲೇ ಬಾಕಿ ಇರುವ ವೇತನ ವನ್ನು ಪಾವತಿಸ ಬೇಕೆಂದು ಒತ್ತಾಯಿಸಿದರು.
ಸೆಪ್ಟಂಬರ್ 8ರಂದು ಬೆಂಗಳೂರು ಚಲೋ ಹೋರಾಟದ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಸುತ್ತೋಲೆ ನೀಡಿದ್ದರೂ ವೇತನವನ್ನೇ ನೀಡದಿರುವ ಸರಕಾರಗಳ ನೀತಿ ಕಾರ್ಮಿಕ ವಿರೋಧಿ ನೀತಿಯಾಗಿದೆ ಎಂದು ಜಿಲ್ಲಾಧ್ಯಕ್ಷೆ ಭವ್ಯರವರು ವಿವರಿಸಿದರು. ವೇತನ ಕೂಡಲೇ ಪಾವತಿಸದಿದ್ದಲ್ಲಿ ಹೋರಾಟವನ್ನು ತೀಕ್ಷ್ಣ ಗೊಳಿಸಲಾಗುವುಧು ಎಂದು ಎಚ್ಚರಿಸಿದರು.
CITUನ ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ಒಟ್ಟು ಸೇರಿ ನೀಡ ಬೇಕಾದ ವೇತನ ಎರಡು ಸರಕಾರಗಳ ಬೇಜವ್ದಾರಿತನದಿಂದ ನಲುಗಿ ಹೋಗಿದೆ ಎಂದು ಹೇಳಿದರು.
ಕಾಲ ಕಾಲಕ್ಕೆ ಸರಿಯಾಗಿ ವೇತನ ನೀಡಲು ಸಾಧ್ಯ ಆಗದಿರುವುದು ಫಸರಕಾರಗಳ ವಿಫಲತೆ ಯಾಗಿದೆ ಎಂದರು. ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಗಿರಿಜಾರವರು ಸ್ವಾಗತಿಸಿದರು. ಜಿಲ್ಲೆ ಮತ್ತು ತಾಲೂಕು ಪಂಚಾಯತು ಮುಖ್ಯ ಕಾರ್ಯ ನಿರ್ವಾ ಹಣಾಧಿಕಾರಿಗಳಿಗೆ ಮನವಿ ನೀಡಲಾಯಿತು.
ಪ್ರತಿಭಟನಾ ಪ್ರದರ್ಶನದ ನೇತ್ರತ್ವವನ್ನು ಮುಂದಾಳು ಗಳಾದ ಬಬಿತ,ವಿದ್ಯಾ, ರತ್ನಮಾಲ,ಉಮಾವತಿ,ರೇಖಾಲತಾ,ಆಸ್ಮಾ,ಅನಿತಾ,ವಸಂತಿ,ಲತಿಕಾ,ಸೇವಂತಿ ಮುಂತಾದವರು ವಹಿಸಿದ್ದರು.