ಮಂಗಳೂರು, ಸೆ.24 (DaijiworldNews/TA): ಚಿರತೆಯೊಂದು ಕರುವಿನ ಮೇಲೆ ದಾಳಿ ಯತ್ನವನ್ನು ಯುವಕನೊಬ್ಬ ತಪ್ಪಿಸಿದ ಘಟನೆ ಮಂಗಳೂರು ಹೊರವಲಯದ ಕುಪ್ಪೆಪದವು ಕಿಲೆಂಜಾರು ಗ್ರಾಮದ ಕುಟ್ಟಿಕಲ ಎಂಬಲ್ಲಿ ನಡೆದಿದೆ.

ಕುಟ್ಟಿಕಲ ಎಂಬಲ್ಲಿಯ ನಿವಾಸಿ ಮೋಹನ್ ಕುಮಾರ್ ಎಂಬ ಯುವಕ ತನ್ನ ಮನೆಯ ಕರುವನ್ನು ಮೇಯಲು ಮನೆಯಿಂದ ಅನತಿ ದೂರದ ಗುಡ್ಡ ಪ್ರದೇಶದಲ್ಲಿ ಬೆಳಗ್ಗೆ ಕಟ್ಟಿದ್ದರು. ಅಪರಾಹ್ನ ಕರುವನ್ನು ವಾಪಸ್ ಕರೆದೊಯ್ಯಲು ಮಧ್ಯಾಹ್ನ ಗುಡ್ಡದ ಬಳಿ ಹೋದಾಗ ಚಿರತೆಯೊಂದು ಕರುವಿನ ಬಳಿ ಕುಳಿತು ಕರುವಿನ ಮೇಲೆ ದಾಳಿಗೆ ಹೊಂಚು ಹಾಕಿತ್ತು. ಸುಮಾರು ಹತ್ತು ಮೀಟರ್ ದೂರದಿಂದ ಚಿರತೆಯನ್ನು ಕಂಡ ಮೋಹನ್ ಗಾಬರಿಯಿಂದ ಕೈಗೆ ಸಿಕ್ಕ ಕಲ್ಲುಗಳನ್ನು ಚಿರತೆಯತ್ತ ಎಸೆದು ಬೊಬ್ಬೆ ಹೊಡೆದು ಚಿರತೆಯನ್ನು ಅಲ್ಲಿಂದ ಓಡಿಸಿ, ಕರುವನ್ನು ಸುರಕ್ಷಿತವಾಗಿ ಕರೆದೊಯ್ಯಲು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಗುರುವಾರ ಬೋನು ಇರಿಸುವುದಾಗಿ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯತ್ ಗೆ ಬೀದಿ ದೀಪ ದುರಸ್ಥಿ ಮಾಡುವಂತೆ ಒತ್ತಾಯಿಸಿದ್ದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಗುರುವಾರ ಬೋನು ತಂದು ಇರಿಸುವುದಾಗಿ ಹೇಳಿದ್ದಾರೆ. ಶೀಘ್ರವಾಗಿ ಚಿರತೆಯನ್ನು ಸೆರೆ ಹಿಡಿಯುವುದಲ್ಲದೆ. ಇಲ್ಲಿ ಕೆಟ್ಟು ಹೋಗಿರುವ ಬೀದಿ ದೀಪವನ್ನು ದುರಸ್ಥಿ ಮಾಡುವಂತೆ ಮೋಹನ್ ಕುಮಾರ್ ಅಗ್ರಹಿಸಿದ್ದಾರೆ.