ಮಂಗಳೂರು, ಸೆ.22 (DaijiworldNews/TA): ನಗರದ ಮೀನುಗಾರಿಕಾ ಬಂದರಿನಲ್ಲಿ ಬೃಹತ್ ಗಾತ್ರದ ಮುಡಾವು ಮೀನು ಮೀನುಗಾರರು ಹಾಗೂ ಸಾರ್ವಜನಿಕರ ಗಮನ ಸೆಳೆದಿದೆ. ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರ ಬಲೆಗೆ ಈ ಅಪರೂಪದ ಗಾತ್ರದ ಮುಡಾವು ಮೀನು ಸಿಕ್ಕಿದೆ ಎನ್ನಲಾಗಿದೆ.

ಬರೋಬ್ಬರಿ 17 ಕೆಜಿ ತೂಕ ಹೊಂದಿದ್ದ ಈ ಮೀನನ್ನು ಮಂಗಳೂರಿನ ಮೀನುಗಾರಿಕಾ ಬಂದರಿಗೆ ತರಲಾಗಿದ್ದು, ಬಂದರಿನಲ್ಲಿ ವಿಶೇಷ ಆಕರ್ಷಣೆಯಾಗಿ ಮಾರ್ಪಟ್ಟಿತ್ತು. ಈ ಮುಡಾವು ಮೀನನ್ನು ಕೆಜಿಗೆ ರೂ. 500ರಂತೆ, ಒಟ್ಟು ಸುಮಾರು ರೂ. 8,500ಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಬೃಹತ್ ಗಾತ್ರದ ಮೀನು ಬಂದರಿಗೆ ಬರುತ್ತಿದ್ದಂತೆ ಅದನ್ನು ನೋಡಲು ಮೀನುಗಾರರು ಹಾಗೂ ಸಾರ್ವಜನಿಕರು ಕುತೂಹಲದಿಂದ ಜಮಾಯಿಸಿದ್ದರು. ಸಾಮಾನ್ಯವಾಗಿ ಕಂಡುಬರುವ ಮುಡಾವು ಮೀನುಗಳಿಗಿಂತ ಭಿನ್ನವಾಗಿ ದೊಡ್ಡ ಗಾತ್ರದಲ್ಲಿದ್ದ ಈ ಮೀನು ಬಂದರಿನಲ್ಲಿ ಕೆಲಕಾಲ ಎಲ್ಲರ ಗಮನ ಸೆಳೆಯಿತು. ಅಪರೂಪದ ಗಾತ್ರದ ಮುಡಾವು ಮೀನು ಸಿಕ್ಕಿರುವುದು ಮೀನುಗಾರರಲ್ಲೂ ಕುತೂಹಲ ಮೂಡಿಸಿದೆ.