ಮಂಗಳೂರು, ಸೆ.21 (DaijiworldNews/AK): ನಗರದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆಯಾದ ಇನ್-ಲ್ಯಾಂಡ್ ಗ್ರೂಪ್ ನ ನೂತನ ಪ್ರೀಮಿಯಂ ವಸತಿ ಸಮುಚ್ಚಯ ಯೋಜನೆ ‘ಇನ್-ಲ್ಯಾಂಡ್ ಯುಫೋರಿಯಾ’ ಯೋಜನೆಯ ಭೂಮಿ ಪೂಜೆ ಮತ್ತು ಶಿಲಾನ್ಯಾಸ ಸಮಾರಂಭ ಮಂಗಳೂರಿನ ಕದ್ರಿಯ ಆರ್ಯ ಸಮಾಜ ರಸ್ತೆಯಲ್ಲಿ ನೆರವೇರಿತು.
























ಕಾರ್ಯಕ್ರಮದಲ್ಲಿ ಬಾಲಂಭಟ್ ಮಠದ ಗಿರಿಧರ್ ಭಟ್, ಬೆಂದೂರ್ ಚರ್ಚ್ನ ಧರ್ಮಗುರು ಫಾ. ವಾಲ್ಟರ್ ಡಿಸೋಜ, ಪಿ.ಎಸ್. ಮೊಹಮ್ಮದ್ ಕಾಮಿಲ್ ಸಖಾಫಿ ಪಾಣೆಮಂಗಳೂರು, ಬಂದರ್ ಅಲ್-ಅಝಹರಿಯಾ ಮದ್ರಸಾದ ಮುಖ್ಯೋಪಾಧ್ಯಾಯ ಮೌಲಾನಾ ಯಾಹ್ಯಾ ಮದನಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಇನ್-ಲ್ಯಾಂಡ್ ಗ್ರೂಪ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿರಾಜ್ ಅಹಮದ್, ಸಂಸ್ಥೆಯ ಮೇಲಿಟ್ಟಿರುವ ನಂಬಿಕೆ ಮತ್ತು ಬೆಂಬಲಕ್ಕಾಗಿ ಧಾರ್ಮಿಕ ಧುರೀಣರು, ಇನ್-ಲ್ಯಾಂಡ್ ಸಂಸ್ಥೆಯ ಸಿಬ್ಬಂದಿ, ಕುಟುಂಬಸ್ಥರು ಹಾಗೂ ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇನ್-ಲ್ಯಾಂಡ್ ಗ್ರೂಪ್ನ ನಿರ್ದೇಶಕರುಗಳಾದ ಮೆರಾಜ್ ಯೂಸುಫ್ ಮತ್ತು ಆರ್ಕಿಟೆಕ್ಟ್ ವಹಾಬ್ ಯೂಸುಫ್, ಯೆನೆಪೊಯ ಗ್ರೂಪ್ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ವೈ. ಅಬ್ದುಲ್ಲಾ ಕುಂಞಿ, ವಾಣಿಜ್ಯೋದ್ಯಮಿ ಸುಧೀರ್ ಶೆಟ್ಟಿ, ಚಾರ್ಟರ್ಡ್ ಅಕೌಂಟೆಂಟ್ ಎಸ್.ಎಸ್.ನಾಯಕ್, ವಿ.ಯು. ಜಾರ್ಜ್, ಸುರೇಶ್ ಪೈ, ಕೆ.ಪಿ. ಜಗದೀಶ್ ಅಧಿಕಾರಿ, ಅನಿಲ್ ಹೆಗ್ಡೆ, ಸೇರಿದಂತೆ ಹಲವರು ಉಪಸ್ಥಿತರಿದ್ದರು..
ನೂತನ ಪ್ರೀಮಿಯಂ ವಸತಿ ಸಮುಚ್ಚಯ ‘ಇನ್-ಲ್ಯಾಂಡ್ ಯುಫೋರಿಯಾ’ 12 ಮಹಡಿಗಳ ಪ್ರೀಮಿಯಂ ಅಪಾರ್ಟ್ಮೆಂಟ್ ಪ್ರತಿ ಮಹಡಿಯಲ್ಲಿ ಕೇವಲ 2 ಅಪಾರ್ಟ್ಮೆಂಟ್ ಹೊಂದಿದ್ದು, ನಿವಾಸಿಗಳ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಟ್ಟು 24 ವಾಸ್ತು ಆಧಾರಿತ 3 BHK ಐಷಾರಾಮಿ ಫ್ಲ್ಯಾಟ್ಗಳಿದ್ದು, 2,475 ಚದರಡಿ ಹಾಗೂ 2,740 ಚದರಡಿ ವಿಸ್ತೀರ್ಣದಲ್ಲಿ ಲಭ್ಯವಿವೆ. ಪ್ರತಿಯೊಂದು ಬೆಡ್ರೂಮ್ಗೆ ಅಟ್ಯಾಚ್ಡ್ ಬಾತ್ರೂಮ್, ಪೌಡರ್ ರೂಮ್, ಅಟ್ಯಾಚ್ಡ್ ಶೌಚಾಲಯವಿರುವ ಗೃಹ ಸಹಾಯಕರ ಕೊಠಡಿ ಹಾಗೂ ಎರಡು ವಾಹನಗಳಿಗೆ ಕವರ್ಡ್ ಪಾರ್ಕಿಂಗ್ ವ್ಯವಸ್ಥೆ ಇದ್ದು, ಕಟ್ಟಡವು 11 ಅಡಿ ಫ್ಲೋರ್-ಟು-ಫ್ಲೋರ್ ಎತ್ತರ, ವೀಡಿಯೊ ಡೋರ್ ಫೋನ್, 24x7 ಸಿಸಿಟಿವಿ ಕಾವಲು, ಆಟೋಮ್ಯಾಟಿಕ್ ಲಿಫ್ಟ್, ಪೂರ್ಣ ಪ್ರಮಾಣದ ಪವರ್ ಬ್ಯಾಕಪ್ ಹಾಗೂ ಅಗ್ನಿಶಾಮಕ ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ.
ಮಹಡಿಯ ಮೇಲ್ಭಾಗದಲ್ಲಿ ಇನ್ಫಿನಿಟಿ ಈಜು ಕೊಳ, ಮಕ್ಕಳ ಈಜು ಕೊಳ, ಸುಸಜ್ಜಿತ ಜಿಮ್, ಮಕ್ಕಳ ಆಟದ ಪ್ರದೇಶ ಹಾಗೂ ಆಕರ್ಷಕ ಎಂಟರೆನ್ಸ್ ಲಾಬಿ ಇರಲಿದೆ. ಕದ್ರಿಯ ಆರ್ಯ ಸಮಾಜ ರಸ್ತೆಯ ಮುಖ್ಯ ಭಾಗದಲ್ಲಿದ್ದು, ಆಧುನಿಕ ವಾಸ್ತುಶಿಲ್ಪ ಹಾಗೂ ಭದ್ರತೆಗೆ ಒತ್ತು ನೀಡಿ ವಿನ್ಯಾಸಗೊಳಿಸಲಾದ 'ಇನ್-ಲ್ಯಾಂಡ್ ಯುಫೋರಿಯಾ' ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ.