ಮಂಗಳೂರು, ಸೆ.21 (DaijiworldNews/AA): ಭಾರತೀಯ ಅಂಚೆ ಇಲಾಖೆ ಮಂಗಳೂರು ವಿಭಾಗದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೇರಿದಂತೆ ಸುಮಾರು 150 ಮಂದಿ ಉಳ್ಳಾಲ ಕಡಲ ಕಿನಾರೆಯಲ್ಲಿ ಸ್ವಚ್ಛ ಸಾಗರ್ ಸುರಕ್ಷಿತ್ ಸಾಗರ್ ಅಭಿಯಾನದಡಿ ಸ್ವಚ್ಛತಾ ಕಾರ್ಯ ನಡೆಸಿದರು.





ಭಾನುವಾರ ಸಂಜೆ 4:00 ರಿಂದ 6:00 ಗಂಟೆಯವರೆಗೆ ಹಿರಿಯ ಅಂಚೆ ಅಧೀಕ್ಷಕರಾದ ಜೋಸೆಫ್ ರೋಡ್ರಿಗಸ್ ಇವರ ನಿರ್ದೇಶನದಲ್ಲಿ, ವರಿಷ್ಠ ಅಂಚೆಪಾಲಕರಾದ ಲೋಕನಾಥ್ ಇವರ ನೇತೃತ್ವದಲ್ಲಿ ಉಳ್ಳಾಲ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂಚೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡಲಕಿನಾರೆಯ ಕಸ ಹಾಗೂ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛತಾಕಾರ್ಯ ಮಾಡಿದರು.
ಈ ವೇಳೆ ತ್ಯಾಜ್ಯಗಳ ವಿಲೇವಾರಿಗೆ ಸಹಕರಿಸಿದ ಉಳ್ಳಾಲ ಪುರಸಭಾ ಪೌರಕಾರ್ಮಿಕರಿಗೆ ಹಿರಿಯ ಅಂಚೆ ಅಧೀಕ್ಷಕರು ಹಾಗೂ ವರಿಷ್ಠ ಅಂಚೆಪಾಲಕರು, ಭಾರತೀಯ ಅಂಚೆ ಇಲಾಖೆಯ ವತಿಯಿಂದ ಸನ್ಮಾನಿಸಿದರು.