ಪುತ್ತೂರು, ಸೆ.16 (DaijiworldNews/AA): ಸೇಂಟ್ ಅಲ್ಫೋನ್ಸಾ ಸಿರೋ-ಮಲಬಾರ್ ಯೂತ್ ಮೂವ್ಮೆಂಟ್ (ಎಸ್ಎಂವೈಎಂ) ವತಿಯಿಂದ ನೆಲ್ಯಾಡಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ 'ಅಲ್ಫಾ ಪ್ರೀಮಿಯರ್ ಲೀಗ್' ಕ್ರಿಕೆಟ್ ಟೂರ್ನಿಯಲ್ಲಿ ಬಿಳಿನೆಲೆ ಬ್ಲಾಸ್ಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.


ಒಟ್ಟು 11 ತಂಡಗಳು ಭಾಗವಹಿಸಿದ್ದ ಈ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಿಳಿನೆಲೆ ಬ್ಲಾಸ್ಟರ್ಸ್ ಹಾಗೂ ಮಂಗಳೂರು ಅದ್ವೈಕ್ ತಂಡಗಳು ಮುಖಾಮುಖಿಯಾದವು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯವು ಸೂಪರ್ ಓವರ್ ಹಂತಕ್ಕೆ ತಲುಪಿದ್ದು, ರೋಚಕ ಅಂತ್ಯದಲ್ಲಿ ಬಿಳಿನೆಲೆ ಬ್ಲಾಸ್ಟರ್ಸ್ ತಂಡ ಗೆಲುವು ಸಾಧಿಸಿ ಚಾಂಪಿಯನ್ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕ್ಯಾನ್ಸರ್ ರೋಗಿಗಳ ನೆರವಿಗಾಗಿ ಕ್ರಿಕೆಟ್ ಟೂರ್ನಿ
ಕ್ರೀಡಾ ಸ್ಪರ್ಧೆಯ ಜೊತೆಗೆ ಸಾಮಾಜಿಕ ಕಳಕಳಿಗೂ ಈ ಟೂರ್ನಿ ಮೆಚ್ಚುಗೆಗೆ ಪಾತ್ರವಾಯಿತು. ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗಿಗಳಿಗೆ 'ಕ್ಯಾನ್ಸರ್ ಕೇರ್' ಯೋಜನೆಯಡಿ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಎಸ್ಎಂವೈಎಂ ಈ ಟೂರ್ನಿಯನ್ನು ಆಯೋಜಿಸಿತ್ತು.
ಕ್ರೀಡಾ ಸ್ಪರ್ಧೆಯ ಜೊತೆಗೆ ಸಾಮಾಜಿಕ ಕಳಕಳಿಗೂ ಈ ಟೂರ್ನಿ ಮೆಚ್ಚುಗೆಗೆ ಪಾತ್ರವಾಯಿತು. ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕ್ಯಾನ್ಸರ್ ರೋಗಿಗಳಿಗೆ 'ಕ್ಯಾನ್ಸರ್ ಕೇರ್' ಯೋಜನೆಯಡಿ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಎಸ್ಎಂವೈಎಂ ಈ ಟೂರ್ನಿಯನ್ನು ಆಯೋಜಿಸಿತ್ತು.
ಬೆಳ್ತಂಗಡಿಯ ಕಲ್ಪತರು ಸ್ಕೂಲ್ ಆಫ್ ಎಜುಕೇಶನ್ ಟ್ರಸ್ಟ್ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದ್ದು, ಟೂರ್ನಿಯ ಪ್ರಥಮ ಬಹುಮಾನವಾಗಿ ನೀಡಲಾದ 25,000 ರೂ. ನಗದು ಬಹುಮಾನವನ್ನು ಪ್ರಾಯೋಜಿಸಿತು. ಎಸ್ಎಂವೈಎಂ ಯುವಕರ ಸಾಮಾಜಿಕ ಬದ್ಧತೆ ಹಾಗೂ ಸಮಾಜಿಕ ಕಾಳಜಿಯನ್ನು ವಂದನೀಯ ಫಾದರ್ ಷಾಜಿ ಮ್ಯಾಥ್ಯೂ ಶ್ಲಾಘಿಸಿದರು.
ಲಿಟ್ಟೋ, ಜೇಸನ್, ನವೀನ್, ಥಾಮಸ್, ಅಭಿನ್, ಶಾನ್, ಜೋಯೆಲ್, ನಯನ್ ಜೋಶುವಾ, ಜೋಶುವಾ ಪುಳ್ಳಿಕ್ಕಲ್, ಅನೂಪ್, ಆ್ಯಶ್ಟನ್, ದಿಶಾ, ಜಿಟ್ಟು, ಸನೂಷಾ, ಸ್ಯಾನ್ ಜೋ, ಸಿಸ್ಟರ್ ರೋಸ್ನಾ ಸೇರಿದಂತೆ ಹಲವರ ನೇತೃತ್ವ ಮತ್ತು ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.