ಉಡುಪಿ, ಸೆ.13 (DaijiworldNews/AA): ಬೋಟ್ನಿಂದ ಮೀನು ಬಲೆ ಎಳೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಅಶೋಕ(42) ಎಂದು ಗುರುತಿಸಲಾಗಿದೆ.
ಪ್ರಕಾಶ್ ಎಂಬುವವರಿಗೆ ಸೇರಿದ ಜೈ ಗಣೇಶ್ ಹೆಸರಿನ ಬೋಟ್ನಲ್ಲಿ ಅಶೋಕ ಅವರು ಸೆಪ್ಟೆಂಬರ್ 8ರಂದು ಮೀನುಗಾರಿಕೆಗೆ ತೆರಳಿದ್ದರು. ಬೋಟ್ ಸಮುದ್ರದಲ್ಲಿದ್ದ ವೇಳೆ ಅಶೋಕ ಅವರು ಮೀನು ಬಲೆಯನ್ನು ಎಳೆಯುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು, ನಾಪತ್ತೆಯಾಗಿದ್ದರು.
ಸೆಪ್ಟೆಂಬರ್ 11ರ ಬೆಳಗ್ಗೆ ಅಶೋಕ ಅವರ ಮೃತದೇಹ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.