ಮಂಗಳೂರು, ಆ. 30 (DaijiworldNews/AA): ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ ಆರೋಪಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗ್ರಾಮದ ಉಪ್ಪಳ ನಿವಾಸಿ ಮಹಮ್ಮದ್ ತೌಸೀಫ್ (40) ಬಂಧಿತ ಆರೋಪಿ.
ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಕ್ರ ನಂಬರ್ 135/2013 ಕಲಂ 392 ಐಪಿಸಿ ಪ್ರಕರಣದಲ್ಲಿ ಆರೋಪಿಯಾದ ಮಹಮ್ಮದ್ ತೌಸೀಫ್ ಪ್ರಕರಣವೊಂದರ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮೆರೆಸಿಕೊಂಡಿದ್ದ. ಹೀಗಾಗಿ 2ನೇ ಸಿಜೆಎಂ ನ್ಯಾಯಾಲಯವು ಪ್ರಕರಣವನ್ನು ಎಲ್ಪಿಸಿ ನಂ. 3/2026 ರಂತೆ ಆದೇಶ ಹೊರಡಿಸಿತ್ತು.
ಆರೋಪಿಯನ್ನು ಆ.29 ರಂದು ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಪರಂಗಿಪೇಟೆ ಯಲ್ಲಿ ದಸ್ತಗಿರಿ ಮಾಡಲಾಯಿತು. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.13 ರ ವರೆಗೆ ನ್ಯಾಯಾಂಗ ಬಂಧನ ವಿಧಿಸುತ್ತದೆ
ಆರೋಪಿ ಮಹಮ್ಮದ್ ತೌಸೀಫ್ ಕುಖ್ಯಾತ ಸರಗಳ್ಳತನದ ಆರೋಪಿಯಾದ ಸೈಯದ್ ಸಾಹೀಲ್ನ ಅಣ್ಣನಾಗಿರುತ್ತಾನೆ.