ಮಂಗಳೂರು, ಆ. 18 (DaijiworldNews/AK): ಸೆಪ್ಟೆಂಬರ್ 3 ಮತ್ತು 4 ರಂದು ಮಂಗಳೂರು ಇಸ್ಕಾನ್ ವತಿಯಿಂದ ಜನ್ಮಾಷ್ಟಮಿ ಮಹೋತ್ಸವ 2026 ಸ್ಕೌಟ್ ಭವನ, ಪಿಲಿಕುಳದಲ್ಲಿ ಆಯೋಜಿಸಲಾಗಿದೆ.

ಈ ಪ್ರಯುಕ್ತ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಇಸ್ಕಾನ್ ಮಂಗಳೂರು ಅಧ್ಯಕ್ಷರು ಗುಣಕರ ರಾಮ ದಾಸ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದ್ರೆ ಯ ಅಧ್ಯಕ್ಷರು
ಡಾ. ಎಂ. ಮೋಹನ್ ಆಳ್ವ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಬಂಟರ ಸಂಘದ ಅಧ್ಯಕ್ಷರು ಮಲಾಡಿ ಅಜಿತ್ ಕುಮಾರ್ ರೈ, ಬಿಜೆಪಿ ದಕ್ಷಿಣ ಕನ್ನಡದ ಅಧ್ಯಕ್ಷರು ಸತೀಶ್ ಕುಂಪಲ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು, ಪ್ರದೀಪ್ ಕುಮಾರ್ ಕಲ್ಕುರ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿವರಗಳು ಹೀಗಿದೆ- 1. ಆಳ್ವಾಸ್ ಅವರ ಉದ್ಘಾಟನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಯ: ಎರಡೂ ದಿನಗಳು, ಸಂಜೆ 6:00 ರಿಂದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ ಮತ್ತು ಭಕ್ತಿ ಪ್ರದರ್ಶನಗಳು. ಭಾರತೀಯ ಸಂಸ್ಕೃತಿ ಮತ್ತು ಕೃಷ್ಣ ಭಕ್ತಿಯನ್ನು ಎತ್ತಿ ತೋರಿಸುವ ಅದ್ದೂರಿ ಕಾರ್ಯಕ್ರಮ.
2. ಅಂತರಾಷ್ಟ್ರೀಯ ಭಜನಾ ಕ್ಲಬ್ಬಿಂಗ್
ಸಮಯ: ಎರಡೂ ದಿನಗಳು, ಮಧ್ಯಾಹ್ನ 2:00 ರಿಂದ 4:00 ರವರೆಗೆ 5 ವಿವಿಧ ದೇಶಗಳ ಭಕ್ತಿಗೀತಾ ಕಲಾವಿದರು ಒಟ್ಟಾಗಿ ಭಜನೆ ಮತ್ತು ಕೀರ್ತನೆಗಳನ್ನು ನಡೆಸಿಕೊಡುವರು. ಹರಿನಾಮ ಸಂಕೀರ್ತನೆಯಲ್ಲಿ ಜಾಗತಿಕ ಭಾಗವಹಿಸುವಿಕೆಯನ್ನು ಪ್ರದರ್ಶಿಸುವ ಉದ್ದೇಶ.
3. ಶ್ರೀಕೃಷ್ಣ ಬಲರಾಮರಿಗೆ ಮಹಾ ಅಭಿಷೇಕ
ಸಮಯ: ಎರಡೂ ದಿನಗಳು ಪಂಚಾಮೃತ ಮತ್ತು ಇತರ ದ್ರವ್ಯಗಳಿಂದ ಶ್ರೀಕೃಷ್ಣ ಬಲರಾಮರಿಗೆ ಅದ್ದೂರಿ ಮಹಾ ಅಭಿಷೇಕ. ಭಕ್ತರು ದರ್ಶನ ಮಾಡಿ ಪಾಲ್ಗೊಳ್ಳಬಹುದು.
4. ಹರಿನಾಮ ಸಂಕೀರ್ತನ ಮತ್ತು ಪುಸ್ತಕ ವಿತರಣೆ
ಉತ್ಸವದ ಮುನ್ನ 5000 ಹರಿನಾಮ ಪುಸ್ತಕಗಳನ್ನು ಮನೆಗಳಿಗೆ ವಿತರಿಸಲಾಗಿದೆ. ಕುಟುಂಬಗಳು ಈ ಪುಸ್ತಕಗಳಲ್ಲಿ "ಹರೇ ಕೃಷ್ಣ ಮಹಾಮಂತ್ರ" ಬರೆದು ಜನ್ಮಾಷ್ಟಮಿ ದಿನ ಕೃಷ್ಣನಿಗೆ ಅರ್ಪಿಸಬಹುದು.
5. ಜನ್ಮಾಷ್ಟಮಿ ಮಹಾ ಆಹಾರ ಮೇಳ
ದಿನಗಳು: ಎರಡೂ ದಿನಗಳು
ವಿವಿಧ ಪ್ರಸಾದ ಕೌಂಟರ್ಗಳಲ್ಲಿ ಪವಿತ್ರ ಸಾತ್ವಿಕ ಭೋಜನ ವ್ಯವಸ್ಥೆ. ಭಕ್ತರು ಮತ್ತು ಸಾರ್ವಜನಿಕರು ಕೃಷ್ಣ ಪ್ರಸಾದವನ್ನು ಸವಿಯಬಹುದು.
6. ಕೃಷ್ಣ ಗಿಫ್ಟ್ ಸೆಂಟರ್
ದೇವತಾ ಪರಿಕರಗಳು, ಪುಸ್ತಕಗಳು, ಬಟ್ಟೆಗಳು, ಸ್ಮರಣಿಕೆಗಳು ಸೇರಿದಂತೆ ಕೃಷ್ಣನಿಗೆ ಸಂಬಂಧಿಸಿದ ವಿವಿಧ ಭಕ್ತಿ ಸಾಮಗ್ರಿಗಳ ಮಾರಾಟ ಮಳಿಗೆಗಳು.
7. ಮಕ್ಕಳು ಮತ್ತು ವಿದ್ಯಾರ್ಥಿಗಳ ಸ್ಪರ್ಧೆಗಳು
1ನೇ ತರಗತಿಯಿಂದ ಕಾಲೇಜು ವಿದ್ಯಾರ್ಥಿಗಳವರೆಗೆ. ಕ್ವಿಜ್, ಚಿತ್ರಕಲೆ, ಶ್ಲೋಕ ಪಠಣ ಮತ್ತು ಕೃಷ್ಣ ಲೀಲಾಧಾರಿತ ಸಾಂಸ್ಕೃತಿಕ ಸ್ಪರ್ಧೆಗಳು.
8. ಉಚಿತ ಬಸ್ ಸೌಲಭ್ಯ
ಸಮಯ: ಎರಡೂ ದಿನಗಳು, ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ ಮಾರ್ಗ: ಇಸ್ಕಾನ್ ಕಲಾಕುಂಜದಿಂದ ಸ್ಕೌಟ್ ಭವನ, ಪಿಲಿಕುಳಕ್ಕೆ ಪ್ರತಿ 10 ನಿಮಿಷಕ್ಕೊಮ್ಮೆ ಎರಡೂ ಕಡೆಗಳಿಗೆ ಉಚಿತ ಬಸ್ ವ್ಯವಸ್ಥೆ.
ಸಭೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಇಸ್ಕಾನ್ ಮಂಗಳೂರಿನ ಈ ಪ್ರಯತ್ನವನ್ನು ಶ್ಲಾಘಿಸಿದರು. ಸಂಸ್ಕೃತಿ, ಭಕ್ತಿ, ಶಿಕ್ಷಣ ಮತ್ತು ಸೇವೆಯನ್ನು ಒಳಗೊಂಡ ಸಮುದಾಯೋತ್ಸವವಾಗಿ ಜನ್ಮಾಷ್ಟಮಿಯನ್ನು ಆಚರಿಸುವಂತೆ ಕರೆ ನೀಡಿದರು.