ಮಂಜೇಶ್ವರ, ಆ. 17 (DaijiworldNews/TA): ಹೊಸಂಗಡಿ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಂನಿಂದ ವಾಹನ ಸವಾರರು ಪರದಾಡಿದ ಘಟನೆ ಸೋಮವಾರ ಬೆಳಗ್ಗೆ ನಡೆಯಿತು.

ಇಲ್ಲಿನ ರೈಲ್ವೇ ಗೇಟ್ ಮುಚ್ಚಿದ್ದ ಪರಿಣಾಮ ಟ್ರಾಫಿಕ್ ಜಾಂ ಹೆಚ್ಚಾಗಿದ್ದು, ಜೊತೆಗೆ ನಾಗರಪಂಚಮಿ ಹಿನ್ನೆಲೆಯಲ್ಲಿ ವಾಹನಗಳ ಸಂಚಾರದಲ್ಲೂ ಹೆಚ್ಚಿದ್ದು, ಪರಿಣಾಮ ಟ್ರಾಫಿಕ್ ಜಾಂ ಉಂಟಾಗಿತ್ತು. ಅಂಗಡಿ ಪದವಿನಿಂದ ಆರಂಭವಾದ ಟ್ರಾಫಿಕ್ ಜಾಂ ಹೊಸಂಗಡಿ ಗೇಟ್ ತನಕ ಮುಂದುವರೆದಿತ್ತು, ನಾಗರಿಕರು ಪರಿತಪಿಸುವಂತಾಗಿತ್ತು.