ಬಂಟ್ವಾಳ, ಆ. 11 (DaijiworldNews/TA): ಹಿಂದು ಜಾಗರಣ ವೇದಿಕೆ ವಾಮದಪದವು ವಲಯ ಬಂಟ್ವಾಳ ತಾಲೂಕು ಮಂಗಳೂರು ಗ್ರಾಮಂತರ ಜಿಲ್ಲೆಯ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಪಂಜಿನ ಮೆರವಣಿಗೆ ಮತ್ತು ಸಭಾ ಕಾರ್ಯಕ್ರಮ ಬಂಟ್ವಾಳದ ವಾಮದಪದವಿನಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಮೋಹನ್ ಶೆಟ್ಟಿ ನರವಲ್ದಡ್ಡ ವಹಿಸಿದ್ದರು. ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ್ ಮಹೇಶ್ ಕಡಗದಾಳು ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅಥಿತಿಯಾಗಿ ಪ್ರಗತಿ ಪರ ಕೃಷಿಕ ಬೂಬಾ ಪೂಜಾರಿ ಮತ್ತು ಪದ್ಮನಾಭ ಭಂಡಾರಿ ಮಂಗಳೂರು ಗ್ರಾಮಂತರ ಜಿಲ್ಲೆಯ ಹಿಂ.ಜಾ.ವೇ. ಸಹ ಸಂಯೋಜಕ ಪುಷ್ಪರಾಜ್ ಕಮ್ಮಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಮದಪದವು ಪೇಟೆಯಲ್ಲಿ ಪಂಜಿನ ಮೆರವಣಿಗೆ ನಡೆಯಿತು.