ಮಂಗಳೂರು, ಆ. 11 (DaijiworldNews/AK):ಪೆರ್ಮುದೆಯಲ್ಲಿ ಚಿರತೆಗಳ ಚಟುವಟಿಕೆ ತೀವ್ರಗೊಂಡಿದ್ದು, ಭಾನುವಾರ ರಾತ್ರಿ ಚಿರತೆಯೊಂದು ಮನೆಯಿಂದ ಸಾಕು ನಾಯಿಯನ್ನು ಹೊತ್ತೊಯ್ದಿದ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೆರ್ಮುದೆ ಗ್ರಾಮ ಪಂಚ ವ್ಯಾಪ್ತಿಯ ನಿಡ್ಡೆಲೆ ಕೋಡಿಯಲ್ಲಿರುವ ದಿವಂಗತ ನೋಣಯ್ಯ ಜಿಕೆ ಅವರ ಮನೆಯ ಆವರಣಕ್ಕೆ ಭಾನುವಾರ ರಾತ್ರಿ 11:40 ರ ಸುಮಾರಿಗೆ ಚಿರತೆ ನುಗ್ಗಿದೆ ಎಂದು ಹೇಳಲಾಗಿದ್ದು, ಅಂಗಳದಲ್ಲಿದ್ದ ಸಾಕು ನಾಯಿಯನ್ನು ಕಚ್ಚಿ ಎಳೆದುಕೊಂಡು ಹೋಗಿದೆ ಎಂದು ವರದಿಯಾಗಿದೆ.
ರಾತ್ರಿ ಮನೆಯ ಆವರಣದಲ್ಲಿದ್ದ ನಾಯಿ ಬೆಳಿಗ್ಗೆ ಕಾಣೆಯಾಗಿರುವುದು ಕಂಡುಬಂದಾಗ, ಕುಟುಂಬದವರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರಿಗೆ ಈ ಘಟನೆ ಆತಂಕ ಮೂಡಿಸಿದೆ. . ಘಟನೆಯ ಬಗ್ಗೆ ಕುಟುಂಬವು ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ. ಚಿರತೆಯನ್ನು ಬಲೆಗೆ ಬೀಳಿಸಲು ಬೋನು ಇಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.