ಬಂಟ್ವಾಳ, ಆ. 09 (DaijiworldNews/TA): ದ.ಕ. ಜಿಲ್ಲಾ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುದು ಪರಂಗಿಪೇಟೆ ಮಾಪ್ಲ ಶಾಲೆಯಿಂದ ಕಾವಳಮೂಡೂರು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಹೊಂದಿ ವರ್ಗಾವಣೆಗೊಂಡ ಅನುಸೂಯ ಹಾಗೂ ವಯೋನಿವೃತ್ತಿ ಹೊಂದಿದ ಜೆಸಿಂತ ಡಿ.ಸೋಜ ಅವರನ್ನು ಶಾಲೆಯ ವತಿಯಿಂದ ಗೌರವಿಸಿ ಬೀಳ್ಕೊಡಲಾಯಿತು.



ಕಾರ್ಯಕ್ರಮದಲ್ಲಿ ಟುಡೇ ಫೌಂಡೇಶನ್ ಅಧ್ಯಕ್ಷ ಉಮ್ಮರ್ ಫಾರೂಕ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿ ನಿವೃತ್ತಿ ಹಾಗೂ ವರ್ಗಾವಣೆ ನಿಶ್ಚಿತ. ಆದರೆ, ಮಕ್ಕಳನ್ನು ದೇಶದ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ಶಾಲಾ ಪೋಷಕರು ಹಾಗೂ ಗ್ರಾಮದ ಜನರಿಂದ ದೊರೆಯುವ ಗೌರವಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಅನುಸೂಯ ಹಾಗೂ ಜೆಸಿಂತ ಅವರು ತಮ್ಮ ಸೇವಾವಧಿಯಲ್ಲಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
SDMC ಹಾಗೂ ಪುದು ಗ್ರಾ.ಪಂ. ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷೆ ನೌಶಿದಾ, ಸದಸ್ಯೆ ಸಾರಮ್ಮ, ಟುಡೇ ಫೌಂಡೇಶನ್ ಸದಸ್ಯ ಮಜೀದ್, ತುಂಬೆ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರಮೇಶ್, ಎಸ್ಡಿಎಂಸಿ ಸದಸ್ಯರಾದ ಎಫ್.ಎಚ್. ಇಸ್ಮಾಯಿಲ್, ರಝಿಯಾ, ನಿವೃತ್ತ ಶಿಕ್ಷಕಿ ಯಮುನಾ ಹಾಗೂ ಶಿಕ್ಷಕಿಯರಾದ ಮಮತಾ, ಅರ್ಪಿತಾ ಉಪಸ್ಥಿತರಿದ್ದರು.