ಮಂಗಳೂರು, ಆ. 09 (DaijiworldNews/TA): ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಅವರು ಮಂಗಳೂರಿನ ಬೋಂದೇಲ್ನ ಸಂತ ಲಾರೆನ್ಸ್ ಚರ್ಚ್ಗೆ ಭೇಟಿ ನೀಡಿ, 10 ದಿನಗಳ ವಾರ್ಷಿಕ ಹಬ್ಬದ ಆಚರಣೆಯ ಭಾಗವಾಗಿ ಪ್ರಾರ್ಥನೆ ಸಲ್ಲಿಸಿದರು.


ತಮ್ಮ ಭೇಟಿಯ ಸಮಯದಲ್ಲಿ, ಯು. ಟಿ. ಖಾದರ್ ಅವರು ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು. ಹಬ್ಬದ ಸಂಭ್ರಮದ ಭಾಗವಾಗಿ ಚರ್ಚ್ನಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಮೇಣದಬತ್ತಿ ಬೆಳಗಿಸುವ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದರು.
ಬೆಂಗಳೂರಿನ ನಿವೃತ್ತ ಆರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ಅವರು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ನೆರೆದಿದ್ದ ಭಕ್ತಾದಿಗಳನ್ನು ಆಶೀರ್ವದಿಸಿದರು. ಬೋಂದೇಲ್ನ ಸಂತ ಲಾರೆನ್ಸ್ ಚರ್ಚ್ನ ಧರ್ಮಗುರು ರೆ. ಫಾ. ಬೆಸಿಲ್ ವಾಸ್ ಹಾಗೂ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜಾನ್ ಡಿ'ಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು.