ಕಾಸರಗೋಡು, ಆ. 06 (DaijiworldNews/ Ak):16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ 25 ವರ್ಷದ ಮಹಿಳೆಯೊಬ್ಬರನ್ನು ಮೆಲ್ಪರಾಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುಮಾರು ಒಂದೂವರೆ ತಿಂಗಳ ಬಳಿಕ ಆಕೆಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.
ಆರೋಪಿಯನ್ನು ಕಣ್ಣೂರು ಜಿಲ್ಲೆಯ ತಾಲಿಪರಾಂಬ ಬಳಿಯ ಪುಲ್ಲಿಪರಾಂಬ ಗ್ರಾಮದ ನಿವಾಸಿ ಸ್ನೇಹ ಮೆರ್ಲಿನ್ ಎಂದು ಗುರುತಿಸಲಾಗಿದೆ. ದೂರಿನ ಕುರಿತು ತನಿಖೆ ಕೈಗೊಂಡ ಬಳಿಕ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ, ಆಕೆಯನ್ನು ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.