ಸುಳ್ಯ, ಆ. 02 (DaijiworldNews/TA): ತಾಲೂಕಿನಲ್ಲಿ ಆ.1ರಂದು ಸುರಿದ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಜನರು ಸಮಸ್ಯೆಗೊಳಗಾದ ಘಟನೆ ವರದಿಯಾಗಿದೆ.

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪಾಲಡ್ಕ ಸಮೀಪ ಭಾರೀ ಮಳೆಗೆ ಪಯಸ್ಬಿನಿ ನದಿ ಉಕ್ಕಿ ಹರಿದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಲ್ಲದೆ ಪೆರಾಜೆಯ ಕಲ್ಚೆರ್ಪೆ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಮರ ಬಿದ್ದು ವಾಹನಗಳ ಸುಗಮ ಸಂಚಾರಕ್ಕೆ ತಡೆ ಉಂಟಾಯಿತು.ಇದಲ್ಲದೆ ಅಲ್ಲಲ್ಲಿ ಮಳೆ ಹಾನಿ ಉಂಟಾದ ಘಟನೆ ವರದಿಯಾಗಿದೆ.