ಬಂಟ್ವಾಳ, ಆ. 01 (DaijiworldNews/AK): ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಜೂನ್ 23, 2025 ರಂದು ಅಪ್ರಾಪ್ತ ಪ್ರಾಯದ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿಗೆ ಮಂಗಳೂರಿನ FTSC-I, ನ್ಯಾಯಾಲಯ 2 ವರ್ಷ 6 ತಿಂಗಳು ಕಾರಾಗೃಹ ಮತ್ತು 40,000 ರೂ. ದಂಡ ವಿಧಿಸಿದೆ.

ಮಣಿನಾಲ್ಕೂರು ನಿವಾಸಿ ಮೋನಪ್ಪ ನಾಯ್ಕ (52) ಎಂಬಾತ ಪ್ರಕರಣದ ಆರೋಪಿ.
ಜೂನ್ 23, 2025 ರಂದು ನಡೆದ ಈ ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ : 79/2025, ಕಲಂ: 11, 12 ಪೋಕ್ಸೋ ಆಕ್ಟ್ -2012 & ಕಲಂ : 75(i) (ii), 79 BNS-2023 ಅಡಿಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದಲ್ಲಿ, ತನಿಖೆ ನಡೆಸಿದ ಪ್ರಕರಣದ ಅಂದಿನ ತನಿಖಾಧಿಕಾರಿಗಳಾದ ಕೀರಪ್ಪ ಘಟಕಾಂಬಳೆ, ಪಿಎಸ್ಐ ರವರು ಹಾಗೂ ಕೃಷ್ಣಕಾಂತ ಪಾಟೀಲ್ ಪಿ.ಎಸ್.ಐ ನಡೆಸಿದ್ದರು. ಆರೋಪಿಯ ವಿರುದ್ದ ಸೂಕ್ತ ಸಾಕ್ಷಿಗಳನ್ನು ಕಲೆಹಾಕಿ, ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು.
ಮಾನ್ಯ FTSC-I, ಮಂಗಳೂರು ನ್ಯಾಯಾಲಯದಲ್ಲಿ, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮೋಹನ್ ಜೆ.ಎಸ್ ರವರು ಆರೋಪಿಗೆ ಜು. 31, 2026 ರಂದು ತೀರ್ಪು ನೀಡಿದರು. ಸರ್ಕಾರಿ ಅಭಿಯೋಜಿಕರಾದ ಸಹನಾದೇವಿ ರವರು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದಿಸಿದರು.
ಮಾನ್ಯ ನ್ಯಾಯಾಲಯವು ಆರೋಪಿಗೆ U/S 74 r/w 62 BNS act ಗೆ 2 ವರ್ಷ 6 ತಿಂಗಳು ಶಿಕ್ಷೆ ಮತ್ತು 15 ಸಾವಿರ ದಂಡ * U/S 75 (2) (3) r/w 62 BNS act ಗೆ 1 ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ. U/S 79/BNS act ಗೆ 1 ವರ್ಷ ಶಿಕ್ಷೆ ಮತ್ತು 5000 ದಂಡ. U/S 12 r/w 18 pocso act-2012 ಗೆ 1ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ. CONCURRENTLY =2 ವರ್ಷ 6 ತಿಂಗಳ ಶಿಕ್ಷೆ ಮತ್ತು ರೂ 40,000 ದಂಡದ ಶಿಕ್ಷೆ ವಿಧಿಸಿ ಅದೇಶಿಸಿದೆ.