ಸುಳ್ಯ, ಜು. 30 (DaijiworldNews/TA): ತಾಲೂಕಿನ ಕೆಲ ಭಾಗಗಳಲ್ಲಿ ತೋಟಗಳಿಗೆ ಕಾಡಾನೆಗಳ ದಾಳಿ ಮುಂದುವರಿದೆ. ಬುಧವಾರ ಬಾಜಿನಡ್ಕ ಸಮೀಪದ ಅಜ್ಜಿಕಲ್ಲು ಭಾಗದಲ್ಲಿ ಕೃಷಿ ನಾಶ ಮಾಡಿದ ಘಟನೆ ನಡೆದಿದೆ.

ಅಜ್ಜಿಕಲ್ಲು ಚೆನ್ನಕೇಶವ ಗೌಡ ರವರ ತೋಟಕ್ಕೆ ಆನೆ ದಾಳಿಯಲ್ಲಿ ಸುಮಾರು 100 ಬಾಳೆಗಿಡಗಳನ್ನು ಎರಡು ತೆಂಗಿನ ಗಿಡ ಇತರೆ ಮರಗಳನ್ನು ತಿಂದು ಹಾಕಿವೆ. ಈ ಭಾಗದ ಜನರು ಕಾಡಾನೆಗಳ ದಾಳಿಗಳಿಂದ ಕಂಗೆಟ್ಟಿದ್ದಾರೆ.