ಮಂಗಳೂರು. ಜು. 22 (DaijiworldNews/AK): ಮಂಗಳೂರು ತಾಲೂಕಿನ ಗೃಹಜ್ಯೋತಿ ಸಮೀಕ್ಷೆಯ ಪ್ರಗತಿ ಪರಿಶೀಲನ ಸಭೆಯು ಮೆಸ್ಕಾಂ ವಿಭಾಗ ಕಛೇರಿ ಅತ್ತಾವರದಲ್ಲಿ 20 ರಂದು ಜರುಗಿತು.

ಈ ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಸುರೇಂದ್ರ.ಬಿ.ಕಂಬಳಿ ಅವರ ಅಧ್ಯಕ್ಷತೆ ನಡೆಯಿತು. ಸಭೆಯಲ್ಲಿ ಮಾತನಾಡಿ ಗೃಹಜ್ಯೋತಿ ಸಮೀಕ್ಷೆ ಬಗ್ಗೆ ಪಲಾನುಭವಿಗಳು ಯಾವುದೇ ಗೊಂದಲ ಮಾಡುವುದು ಬೇಡ ಸಮೀಕ್ಷೆ ಬಗ್ಗೆ ಏನಾದರು ಸಮಸ್ಯೆ ಇದ್ದಲಿ ಗ್ಯಾರಂಟಿ ಸದಸ್ಯರು ಅಥವಾ ನನ್ನನು ಸಂಪರ್ಕಿಸುವಂತೆ ಸಭೆಯಲ್ಲಿ ತಿಳಿಸಿದರು ಮತ್ತು ಮೆಸ್ಕಾಂ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ತಿಳಿಸಿದರು.
ಮಂಗಳೂರು ತಾಲೂಕಿನಲ್ಲಿ ಒಟ್ಟು 1,60,954 ಸಂಖ್ಯೆಯ ಗೃಹಜ್ಯೋತಿ ಫಲಾನುಭವಿಗಳಿದ್ದು, ಇದರಲ್ಲಿ 62402 ಸಂಖ್ಯೆಯ ಫಲಾನುಭವಿಗಳ ಸಮೀಕ್ಷೆಯು ಈವರೆಗೆ ಪೂರ್ಣಗೊಂಡಿರುತ್ತದೆ ಎಂದು ಮೆಸ್ಕಾಂ ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಸದಸ್ಯರಾದ ಆಲ್ವಿನ್ ಡಿ’ಕುನ್ಹಾ ಮತ್ತು ತಾಲೂಕು ಸಮಿತಿಯ ಸದಸ್ಯರುಗಳಾದ ರಾಜೇಶ್ ಶೆಟ್ಟಿ, ಶ್ರೀಧರ್ ಪಂಜ , ಪ್ರಶಾಂತ್ ಎಸ್, ನವಾಸ್ , ಶೈಲಾ ಅನಿತಾ ಡಿ’ಸೋಜಾ, ಜಯಂತಿ, ದಿವ್ಯಾ, ಡಿ.ಎಂ. ಮುಹಮ್ಮದ್ ಮುಸ್ತಾಫ ಹಾಗೂ ಮೆಂಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್.ಲೋಹಿತ್ ಮತ್ತು ಉಪವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು.