ಮಂಗಳೂರು,ಜು. 21 (DaijiworldNews/AK): ಜೆಪ್ಪಿನಮೊಗರು ಸಂಗಮ್ ಫ್ರೆಂಡ್ಸ್ ಕ್ಲಬ್ನ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. 2026-27 ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಸುಧಾಕರ್ ಜೆ. ಗೌರವಾಧ್ಯಕ್ಷರಾಗಿ, ಪುಷ್ಪರಾಜ್ ಶೆಟ್ಟಿ ಉಪಾಧ್ಯಕ ್ಷರಾಗಿ ಸಂತೋಷ್ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿಯಾಗಿ ಕೀರ್ತಿ ರಾಜ್ ಅಮೀನ್, ಕೋಶಾಧಿಕಾರಿಯಾಗಿ ಸಂದೇಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಜಯರಾಮ್ ಕೊಟ್ಟಾರಿ ಆಯ್ಕೆಯಾದರು. 20 ಮಂದಿಯ
ಕಾರ್ಯಕಾರಿ ಸಮಿತಿ ರಚಿಸಲಾಯಿತು.
ಸಭೆಯಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಉತ್ತೀರ್ಣರಾದ ಸ್ಥಳೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಬಗ್ಗೆ ತೀರ್ಮಾನಿಸಲಾಯಿತು. ಕೀರ್ತಿರಾಜ್ ಅಮೀನ್ ಸ್ವಾಗತಿಸಿ ಸಂದೇಶ್ ಕುಮಾರ್ ವಂದಿಸಿದರು.