ಸುಳ್ಯ, ಜು. 15 (DaijiworldNews/TA): ಅರಂತೋಡು ಗ್ರಾಮದಲ್ಲಿ ರೈತರ ತೋಟಗಳಿಗೆ ಕಾಡಾನೆಗಳ ದಾಳಿ ಮುಂದುವರಿದಿದೆ. ಜು.13ರಂದು ತಡ ರಾತ್ರಿ ಅರಂತೋಡು ಗ್ರಾಮದ ಗುಂಡ್ಲ, ರವೀಂದ್ರ ಕೇಪಣ್ಣ ಮತ್ತು ಅವರ ಕಿರಿಯ ಸಹೋದರ ಸುಬ್ಬಪ್ಪ ಅವರ ತೋಟಗಳಿಗೆ ನುಗ್ಗಿದ ಕಾಡಾನೆಗಳು ಬಾಳೆ,ಅಡಿಕೆ ಮರ ಸೇರಿದಂತೆ ಇತರ ಬೆಳೆಗಳನ್ನು ನಾಶ ಪಡಿಸಿವೆ.

ಸುಳ್ಯ ಭಾಗದಲ್ಲಿ ನಿರಂತರವಾಗಿ ಆನೆಗಳು ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಭಯ ಸೃಷ್ಟಿಸಿದೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುವ ಸುಳ್ಯ ಭಾಗದ ರೈತರು ತಾವು ಬೆಳೆದ ಬೆಳೆಗಳು ಕಾಡಾನೆಗಳ ತುಳಿತಕ್ಕೆ ಸಿಕ್ಕಿ ಹಾಳಾಗುತ್ತಿರುವುದುಕ್ಕೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದಾರೆ.