ಸುಳ್ಯ, ಜು. 05 (DaijiworldNews/TA): ತಾಲೂಕಿನ ಆಲೆಟ್ಟಿ ಗ್ರಾಮದ ಅರಂಬೂರು ಭಾಗದಲ್ಲಿ ಶನಿವಾರ ರಾತ್ರಿ ಕಾಡಾನೆಗಳು ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡಿದ ಘಟನೆ ನಡೆದಿದೆ.

ಅರಂಬೂರು ನಿವಾಸಿ ಕಲಂದರ್ ಅವರ ತೋಟಕ್ಕೆ ನುಗ್ಗಿ ಕೃಷಿ ನಾಶ ಮಾಡಿವೆ. ಅಲ್ಲದೆ ಸ್ಥಳೀಯ ಇತರರ ತೋಟಗಳಿಗೆ ಕಾಡಾನೆಗಳು ನುಗ್ಗಿವೆ ಎಂದು ತಿಳಿದು ಬಂದಿದೆ.