ಬಂಟ್ವಾಳ, ಜೂ. 27 (DaijiworldNews/TA): ನಾಡಪ್ರಭು ಕೆಂಪೇಗೌಡರ ಜನ್ಮ ದಿನಾಚರಣೆ ಬಂಟ್ವಾಳ ತಾಲೂಕು ಆಡಳಿತ ಸೌಧದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ನಡೆಯಿತು.


ಬಂಟ್ವಾಳ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಮಾತನಾಡಿ, ಕೆಂಪೇಗೌಡರು ನಾಡು ಕಟ್ಟಿದವರು, ಇಂದು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲು ಅವರ ಕೊಡುಗೆಗಳು ಕಾರಣ, ಬೆಂಗಳೂರನ್ನು ನಿರ್ಮಿಸುವ ಮೂಲಕ ಮಾದರಿ ನಗರವೊಂದನ್ನು ಸೃಷ್ಟಿಸಿ ಜಗತ್ತಿನ ಗಮನ ಸೆಳೆಯುವಂತೆ ಮಾಡಿದ್ದಾರೆ ಎಂದರು. ಉಪತಹಸೀಲ್ದಾರ್ ನರೇಂದ್ರನಾಥ್ ಮಿತ್ತೂರು ಅಧ್ಯಕ್ಷತೆ ವಹಿಸಿದ್ದರು. ಸಂಘದ ಉಪಾಧ್ಯಕ್ಷರಾದ ವೆಂಕಪ್ಪ ಗೌಡ, ತನಿಯಪ್ಪ ಗೌಡ ಉಪಸ್ಥಿತರಿದ್ದರು.