ಉಡುಪಿ, ಜೂ. 27 (DaijiworldNews/TA): ಆತ್ರಾಡಿಯಿಂದ ಹುಬ್ಬಳ್ಳಿಗೆ ಕಾಗದ ಪೆಟ್ಟಿಗೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಶನಿವಾರ ಮುಂಜಾನೆ ಕೆಳಪರ್ಕಳದ ಜಂಕ್ಷನ್ ಬಳಿ ರಸ್ತೆಯಲ್ಲಿ ಚೆಲ್ಲಿದ ರೆಡಿ-ಮಿಕ್ಸ್ ಕಾಂಕ್ರೀಟ್ ಮೇಲೆ ಸ್ಕಿಡ್ ಆಗಿ ಪಲ್ಟಿಯಾಗಿದೆ.



ರೆಡಿ-ಮಿಕ್ಸ್ ಕಾಂಕ್ರೀಟ್ ಟ್ರಕ್ ಚೆಲ್ಲಿದ ಕಾಂಕ್ರೀಟ್ ಮತ್ತು ಜಲ್ಲಿ ಮಿಶ್ರಣದ ಮೇಲೆ ಜಾರಿದ ಪರಿಣಾಮ ವಾಹನದ ನಿಯಂತ್ರಣ ಕಳೆದುಕೊಂಡು ಈ ಅಪಘಾತ ಸಂಭವಿಸಿದೆ. ಅಪಘಾತದ ಬಳಿಕ ಲಾರಿಯಿಂದ ಡೀಸೆಲ್ ಸೋರಿಕೆಯಾಗಿದ್ದು, ಅಪಾರ ನಷ್ಟವಾಗಿದೆ.
ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರೆಡಿ-ಮಿಕ್ಸ್ ಕಾಂಕ್ರೀಟ್ ಟ್ರಕ್ ಗಳು ಈ ರಸ್ತೆಯಲ್ಲಿ ಆಗಾಗ್ಗೆ ಕಾಂಕ್ರೀಟ್ ಮತ್ತು ಜಲ್ಲಿಕಲ್ಲುಗಳನ್ನು ಸುರಿಯುತ್ತವೆ, ಇದರಿಂದಾಗಿ ರಸ್ತೆ ಜಾರುತ್ತದೆ ಮತ್ತು ವಾಹನ ಸವಾರರಿಗೆ ಅಪಾಯಕಾರಿಯಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.