Karavali
ದಾಯ್ಜಿವಲ್ಡ್ ಉಡುಪಿ ವತಿಯಿಂದ “ಚಾಣಾಕ್ಷ ಚಾಲೆಂಜ್ ನಾಲ್ಕನೇ ಆವೃತ್ತಿ” ಪ್ರೌಡಶಾಲಾ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ
- Fri, Jun 26 2026 04:22:19 PM
-
ಉಡುಪಿ, ಜೂ. 26 (DaijiworldNews/TA): ಉಡುಪಿ ಸ್ಟುಡಿಯೋ ವತಿಯಿಂದ ಚಾಣಾಕ್ಷ ಚಾಲೆಂಜ್ ನಾಲ್ಕನೇ ಆವೃತ್ತಿ ಅನಾವರಣಗೊಂಡಿದೆ. ಪ್ರೌಡಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ರಸಪ್ರಶ್ನೆ ಸ್ಪರ್ಧೆಯ ಆಡಿಷನ್ ಗಳು ಆಗಸ್ಟ್ 02, 2026 ರಂದು ಉಡುಪಿ ಪೆರಂಪಳ್ಳಿಯ ಟ್ರನಿಟಿ ಸೆಂಟ್ರಲ್ ಶಾಲೆಯಲ್ಲಿ ನಡೆಯಲಿದೆ. ಕಾರ್ಯಕ್ರಮದ ಲೋಗೋ ವನ್ನು ಗೋಲ್ಡನ್ ಬುಕ್ ಆಫ್ ವಲ್ಡ್ ರೆಕಾರ್ಡ್ ಪುರಸ್ಕ್ರತ ವಿದ್ವಾನ್ ಯಶವಂತ್ ಎಂ ಜಿಯವರು ಇತ್ತಿಚಿಗೆ ಅನಾವರಣಗೊಳಿಸಿದರು.








ಈ ಸಂಧರ್ಭದಲ್ಲಿ ಮಾತನಾಡಿದ ಚಾಣಾಕ್ಷ ಚಾಲೆಂಜ್ ನಾಲ್ಕನೇ ಆವೃತ್ತಿಯ ಕ್ಚಿಜ್ ಮಾಸ್ಟರ್ ಆಲ್ವಿನ್ ದಾಂತಿ ಪೆರ್ನಾಲ್ ರವರು “ಪ್ರೌಡಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅಪೂರ್ವ ಅವಕಾಶಗಳು ಇರುತ್ತವೆ. ದಾಯ್ಜಿವಲ್ಡ್ ಉಡುಪಿ ವತಿಯಿಂದ ವಿದ್ಯಾರ್ಥಿಗಳಿಗೆ ಮನೋರಂಜನೆಯೊಂದಿಗೆ ಜ್ಞಾನಭರಿತ ವಿವಿಧ ಕಾರ್ಯಕ್ರಮಗಳು ನಿರಂತರವಾಗಿ ಆಯೋಜನೆ ಆಗುತ್ತಿರುವುದು ಸಂತೋಷದಾಯಕ” ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಆಕಾಡೆಮಿ ಆಫ್ ಜನರಲ್ ಎಜುಕೇಶನ್ ಆಢಳಿತಾಧಿಕಾರಿ ಮತ್ತು ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ನ ಪ್ರಾಧ್ಯಾಪಕರಾದ ಡಾಕ್ಟರ್ ಶ್ರೀಧರ್ ರಂಗನಾಥ್ ಪೈ ಮಾತನಾಡಿ “ಪ್ರೌಡಶಾಲಾ ಹಂತ ವಿದ್ಯಾರ್ಥಿಗಳ ಜೀವನದಲ್ಲಿ ಅಭೂತಪೂರ್ವ ಸಮಯ. ದಾಯ್ಜಿವಲ್ಡ್ ಉಡುಪಿ ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ” ಎಂದರು.
ಕಾರ್ಯಕ್ರಮದಲ್ಲಿ ಅಭಿವ್ಯಕ್ತ ಕಾರ್ಯಕ್ರಮದ ತೀರ್ಪುಗಾರರಾದ ಶ್ರೇಯಸ್ ಕೋಟ್ಯಾನ್, ರಾಜಕೀಯ ವಕ್ತಾರರಾದ ನೀತಾ ಪ್ರಭು, ಕಿಶೂ ಎಂಟರ್ ಪ್ರೈಸಸ್ ನ ಆಡಳಿತ ನಿರ್ದೇಶಕರಾದ ಕಿಶೋರ್ ಗೊನ್ಸಾಲ್ವಿಸ್, ದಾಯ್ಜಿವಲ್ಡ್ ಉಡುಪಿ ಮ್ಯಾನೇಜರ್ ಕೆವಿನ್ ರೊಡ್ರಿಗಸ್, ಕೊಡುಗೈ ದಾನಿ ಜೋಸೆಫ್ ಮಿನೇಜಸ್, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಆಲ್ವಿನ್ ದಾಂತಿ ಪೆರ್ನಾಲ್ ಕ್ವಿಜ್ ಮಾಸ್ಟರ್ ಆಗಿ ನಿರ್ವಹಣೆ ಮಾಡಲಿದ್ದಾರೆ. ಆಡಿಷನ್ ಸುತ್ತಿನಲ್ಲಿ ಭಾಗವಹಿಸುವ ಎಲ್ಲಾ ಭಾಗವಹಿಸುವವರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆಯುವ ತಂಡಗಳಿಗೆ ನಗದು ಬಹುಮಾನಗಳು, ಟ್ರೋಫಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
ಚಾಣಾಕ್ಷ ಚಾಲೆಂಜ್ 4ನೇ ಆವೃತ್ತಿ : ನಿಯಮಗಳು
1. ನೋಂದಣಿ
1. ಪ್ರತಿ ತಂಡದಲ್ಲಿ ಇಬ್ಬರು ಸ್ಪರ್ಧಿಗಳು ಇರಬೇಕು.
2. ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
3. ಪ್ರತಿ ಶಾಲೆಯಿಂದ ಗರಿಷ್ಠ ಐದು ತಂಡಗಳಿಗೆ ಆಡಿಷನ್ ಸುತ್ತಿನಲ್ಲಿ ನೋಂದಾಯಿಸಲು ಅವಕಾಶ ಇರುತ್ತದೆ.
4. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಆಯೋಜಕರು ನೀಡಿರುವ ಅಧಿಕೃತ ನೋಂದಣಿ ಲಿಂಕ್ ಮೂಲಕ
ಸಂಪೂರ್ಣವಾಗಿ ಭರ್ತಿ ಮಾಡಿದ ನೋಂದಣಿ ಪತ್ರವನ್ನು ಸಲ್ಲಿಸುವ ಮೂಲಕ ತಮ್ಮ ಭಾಗವಹಿಸುವಿಕೆಯನ್ನು
ದೃಢೀಕರಿಸಬೇಕು. ನೋಂದಣಿ ಪತ್ರದಲ್ಲಿ ಈ ಕೆಳಗಿನ ಮಾಹಿತಿಗಳನ್ನು ಸ್ಪಷ್ಟವಾಗಿ ನಮೂದಿಸಬೇಕು: ಸ್ಪರ್ಧಿಯ
ಹೆಸರು, ತರಗತಿ, ಶಾಲೆಯ ಹೆಸರು, ಶಿಕ್ಷಕರ / ಪೋಷಕರ ಮೊಬೈಲ್ ಸಂಖ್ಯೆ
5. ಸಂಪೂರ್ಣವಾಗಿ ಭರ್ತಿ ಮಾಡಿದ ನೋಂದಣಿ ಫಾರ್ಮ್ ಅನ್ನು ನಿಗದಿತ ಕೊನೆಯ ದಿನಾಂಕದೊಳಗೆ ನೋಂದಣಿ ಲಿಂಕ್
ಮೂಲಕ ಸಲ್ಲಿಸಬೇಕು.2. ಆಡಿಷನ್ ಸುತ್ತು
6. ಆಡಿಷನ್ ಸುತ್ತಿನಲ್ಲಿ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ
ತಂಡಗಳು ಸ್ಟುಡಿಯೋ ಸುತ್ತಿಗೆ ಅರ್ಹತೆ ಪಡೆಯುತ್ತವೆ.
7. ಲಿಖಿತ ಪರೀಕ್ಷೆಯಲ್ಲಿ 50 ಬಹು ಆಯ್ಕೆ ಪ್ರಶ್ನೆಗಳು (MCQs) ಇರುತ್ತವೆ.
8. ಪ್ರಶ್ನೆಪತ್ರಿಕೆಯನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನೀಡಲಾಗುತ್ತದೆ.
9. ಪರೀಕ್ಷೆಯನ್ನು ಉತ್ತರಿಸಲು 60 ನಿಮಿಷಗಳ ಕಾಲಾವಕಾಶ ನೀಡಲಾಗುವುದು. ಜೊತೆಗೆ ಉತ್ತರಪತ್ರಿಕೆ ಸಲ್ಲಿಕೆಗಾಗಿ
ಹೆಚ್ಚುವರಿ 15 ನಿಮಿಷಗಳನ್ನು ನೀಡಲಾಗುವುದು.
10. ಪ್ರಶ್ನೆಪತ್ರಿಕೆಯು ಸಾಮಾನ್ಯ ಜ್ಞಾನ, ಇತಿಹಾಸ, ಪ್ರಚಲಿತ ವಿದ್ಯಮಾನಗಳು, ವಿಜ್ಞಾನ, ಕ್ರೀಡೆ, ಸಾಹಿತ್ಯ ಮತ್ತು ಇತರೆ
ವಿಷಯಗಳನ್ನು ಒಳಗೊಂಡಿರುತ್ತದೆ.
11. ಆಡಿಷನ್ ಸುತ್ತಿನಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರವನ್ನು ನೀಡಲಾಗುವುದು.12. ಆಡಿಷನ್ ಸುತ್ತಿನ ವಿವರಗಳು:
ದಿನಾಂಕ: ಭಾನುವಾರ, ಆಗಸ್ಟ್ 2, 2026
ಸ್ಥಳ: ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ
ಸಮಯ: ಮಧ್ಯಾಹ್ನದ ಅವಧಿ
13. ಆಡಿಶನ್ ಸುತ್ತು ಮತ್ತು ಪರೀಕ್ಷೆ ಕುರಿತಾದ ಸಂಪೂರ್ಣ ವಿವರಗಳನ್ನು ನೋಂದಣಿ ಪೂರ್ಣಗೊಂಡ ಬಳಿಕ
ತಿಳಿಸಲಾಗುವುದು.3. ಸ್ಟುಡಿಯೋ ಸುತ್ತುಗಳು
14. ಆಡಿಷನ್ ಸುತ್ತಿನಲ್ಲಿ ಆಯ್ಕೆಯಾದ ತಂಡಗಳು ಸ್ಟುಡಿಯೋ ಸುತ್ತಿಗೆ ಅರ್ಹತೆ ಪಡೆಯುತ್ತವೆ.
15. ಕಾರ್ಯಕ್ರಮವು ಕನ್ನಡ ಭಾಷೆಯಲ್ಲಿ ನಡೆಯಲಿದೆ. ಪ್ರಶ್ನೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ
ಕೇಳಲಾಗುವುದು.
16. ಸ್ಪರ್ಧೆಯು ವಿವಿಧ ಹಂತಗಳು ಮತ್ತು ವಿಭಿನ್ನ ರೀತಿಯ ಕ್ವಿಜ್ ಸುತ್ತುಗಳನ್ನು ಒಳಗೊಂಡಿರುತ್ತದೆ.
17. ಪ್ರತಿಯೊಂದು ತಂಡವು ತನ್ನ ಶಾಲೆಯ ಹೆಸರಿನ ಮೂಲಕ ಪ್ರತಿನಿಧಿಸಲ್ಪಡುತ್ತದೆ.
18. ಕ್ವಿಜ್ ಮಾಸ್ಟರ್ ಹಾಗೂ ಆಯೋಜಕರ ತೀರ್ಮಾನ ಅಂತಿಮ.
19. ಸ್ಪರ್ಧೆಯನ್ನು ದಾಯ್ಜಿವರ್ಲ್ಡ್ 24x7 ವಾಹಿನಿಯಲ್ಲಿ ಸಂಚಿಕೆಗಳ ರೂಪದಲ್ಲಿ ಪ್ರಸಾರ ಮಾಡಲಾಗುವುದು.
20. ಎಲ್ಲಾ ಸ್ಟುಡಿಯೋ ಸುತ್ತುಗಳ ಚಿತ್ರೀಕರಣವು ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ ನಡೆಯಲಿದೆ.
21. ಅಗತ್ಯವಿದ್ದಾಗ ಸ್ಪರ್ಧಿಗಳೊಂದಿಗೆ ಪೋಷಕರು ಅಥವಾ ಶಿಕ್ಷಕ ಸಂಯೋಜಕರು ಕಡ್ಡಾಯವಾಗಿ ಹಾಜರಿರಬೇಕು.
ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ಅಧಿಕೃತ ಮಾಹಿತಿಯನ್ನು ನೋಂದಾಯಿತ ಶಿಕ್ಷಕ ಸಂಯೋಜಕ ಅಥವಾ ಪೋಷಕರಿಗೆ
ಮಾತ್ರ ತಿಳಿಸಲಾಗುವುದು.
22. ಅನಿವಾರ್ಯ ಸಂದರ್ಭಗಳಲ್ಲಿ ಸ್ಪರ್ಧೆಯಲ್ಲಿ ಯಾವುದೇ ಬದಲಾವಣೆ ಮಾಡಲು, ಮುಂದೂಡಲು ಅಥವಾ
ರದ್ದುಗೊಳಿಸಲು ಆಯೋಜಕರಿಗೆ ಪೂರ್ಣ ಹಕ್ಕು ಇರುತ್ತದೆ.4. ಬಹುಮಾನಗಳು
ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸುವ ತಂಡಗಳಿಗೆ ಆಕರ್ಷಕ:
ನಗದು ಬಹುಮಾನ
ಟ್ರೋಫಿ
ಪ್ರಮಾಣಪತ್ರ ನೀಡಲಾಗುವುದು.ನೋಂದಣಿಗೆ ಕೊನೆಯ ದಿನಾಂಕ:
ಶನಿವಾರ, ಜುಲೈ 25, 2026
ನೋಂದಣಿಗೆ :
www.daijiworldudupi.com/cc4ಹೆಚ್ಚಿನ ಮಾಹಿತಿಗಾಗಿ:
ಹೆಚ್ಚಿನ ಮಾಹಿತಿ ಹಾಗೂ ಭಾಗವಹಿಸುವಿಕೆಗಾಗಿ:
+91 73386 37690
+91 99001 61556
contestdwudupi@gmail.com