ಬಂಟ್ವಾಳ, ಜೂ. 25 (DaijiworldNews/TA): ಸೇಕ್ರೆಡ್ ಹಾರ್ಟ್ ತೊಡಂಬಿಲ ಚರ್ಚ್ ನ ಕ್ಯಾಥೋಲಿಕ್ ಸಭಾ ಘಟಕದ ವತಿಯಿಂದ ಬೃಹತ್ ಮಳೆಕೊಯ್ಲು ಅಭಿಯಾನ 2026 ಪ್ರಾತ್ಯಕ್ಷಿಕೆ ಕಾರ್ಯಕ್ರಮ ಜೂ.21ರಂದು ಬಂಟ್ವಾಳ ತಾಲೂಕಿನ ಕಲ್ಲಿಗೆ ಗ್ರಾಮದ ಕನಪಾಡಿ ನೋಬರ್ಟ್ ಲೋಬೊ ಅವರ ಮನೆ ಪರಿಸರದಲ್ಲಿ ನಡೆಯಿತು.

ಚರ್ಚ್ ನ ಧರ್ಮಗುರು ವಂದನೀಯ ಆಂಟನಿ ಲೋಬೊ ಅವರು ಮಾತನಾಡಿ, ಪ್ರಸ್ತುತ ಕಾಲದಲ್ಲಿ ಮಳೆ ನೀರನ್ನು ಬೋರ್ ವೆಲ್ ಗೆ ಇಂಗಿಸುವ ಬಗ್ಗೆ ಹಾಗೂ ಮಳೆ ನೀರನ್ನು ಉಪಯೋಗಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ಕಲ್ಲಿಗೆ ಗ್ರಾ.ಪಂ. P.D.O ಚಂದ್ರಾವತಿ ಮಾತನಾಡಿ, ಬೋರ್ ವೆಲ್ ಗಳಿಗೆ ನೀರು ಇಂಗಿಸುವ ಮಹತ್ವವನ್ನು ಹಾಗೂ ಕೆಲಸಗಳಿಗೆ ಪಂಚಾಯಿತಿಯಿಂದ ತಾವು ಸರಕಾರದ ಅನುದಾನವನ್ನು ಜನರಿಗೆ ಒದಗಿಸಿ ಕೊಡುವುದಾಗಿ ತಿಳಿಸಿದರು. ಕ್ಯಾಥೋಲಿಕ್ ಸಭಾ ಸದಸ್ಯರಾದ ಫ್ರಾನ್ಸಿಸ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.