ಬಂಟ್ವಾಳ, ಜೂ. 06 (DaijiworldNews/TA): ಬೆದ್ರಾಡಿಯಿಂದ ಮುಂಡಾಜೆಗೆ ತೆರಳುವ ಕಲ್ಲಿಗೆ ಎಂಬಲ್ಲಿ ರಸ್ತೆಗೆ ಡಾಮರೀಕರಣವಾಗದೇ ಜನರ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಸಂದರ್ಭ ರಸ್ತೆ ಸಂಪೂರ್ಣ ಕೆಸರುಮಯವಾಗುತ್ತೆ, ವಾಹನಗಳು ಸಂಚಾರ ಮಾಡಲಾಗದೆ ನಡೆದುಕೊಂಡು ಹೋಗಬೇಕಾಗಿದೆ.


ಪ್ರತಿದಿನ ಶಾಲಾ- ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಶಾಲಾ ವಾಹನ ಬಾರದೆ ಸಮಸ್ಯೆ ಅನುಭವಿಸುವಂತಾಗಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಬೇಕಾದರೂ, ಹಿರಿಯ ನಾಗರಿಕರನ್ನು ಕೂಡ ಹೊತ್ತುಕೊಂಡೇ ಹೋಗಬೇಕಾದ ಸ್ಥಿತಿಯಿದೆ. ಕಳೆದ 12 ವರ್ಷದಿಂದ ಹಲವು ಬಾರಿ ಮನವಿ ಮಾಡಿದರೂ ಜನಪ್ರತಿನಿದಿಗಳು ಸ್ಪಂದಿಸಿಲ್ಲ.
ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸವಾರರು ಎದ್ದು ಬಿದ್ದು ಹೋಗಬೇಕಾಗಿದೆ. ತಕ್ಷಣವೇ ಅಧಿಕಾರಿಗಳು, ಜನಪ್ರತಿನಿಧಿಗಳ ಸ್ಪಂದಿಸಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.