ಮಂಗಳೂರು, ಜೂ. 06 (DaijiworldNews/AK):ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್, ಮಂಗಳೂರು ವತಿಯಿಂದ ವಿವಿಧ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ಮಂಗಳೂರಿನ ಠಾಕೂರ್ ಪಾರ್ಕ್ ನಲ್ಲಿ ಸಸಿ ನೆಡುವ ಮೂಲಕ ನೀಡಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಪರಿಸರ ಇಂಜಿನಿಯರ್ ದಯಾನಂದ್ ಪೂಜಾರಿ , ಆರೋಗ್ಯ ಮೇಲ್ವಿಚಾರಕ ವಿನಾಯಕ್ ಎಸ್ ಮ್ , ಪರಿಸರ ಪ್ರೇಮಿ ಮಾಧವ್ ಉಳ್ಳಾಲ್ , ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶಾಖೆಯ ಸ್ಟೋರ್ ಹೆಡ್ ಹಫೀಜ್ ರೆಹಮನ್ , ಮಾರ್ಕೆಟಿಂಗ್ ಮ್ಯಾನೇಜರ್ ಶೇಕ್ ಫಾರ್ಹನ್ ಹಾಗೂ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಠಾಕೂರ್ ಪಾರ್ಕ್ನಲ್ಲಿ ಸಸಿ ನೆಡುವ ಕಾರ್ಯಕ್ರಮದ ಬಳಿಕ ಕುನಿಲ್ ಸ್ಕೂಲ್ , ದೇರಳಕಟ್ಟೆಯಲ್ಲಿ 25ಕ್ಕೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು. ಅಲ್ಲದೆ ಶಾಲಾ ಆವರಣದಲ್ಲಿಯೂ ಸಸಿ ನೆಡುವ ಕಾರ್ಯ ನಡೆಸಲಾಯಿತು.
ನಂತರ ಮಲಬಾರ್ ಗೋಲ್ಡ್ & ಡೈಮಂಡ್ಸ್ ಮಂಗಳೂರು ಶೋರೂಮ್ಗೆ ಆಗಮಿಸಿದ ಗ್ರಾಹಕರಿಗೂ ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಸಸಿಗಳನ್ನು ವಿತರಿಸಲಾಯಿತು.
ಪರಿಸರ ಸಂರಕ್ಷಣೆ ಮತ್ತು ಹಸಿರು ಭವಿಷ್ಯದ ನಿರ್ಮಾಣದ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು ಪರಿಸರದತ್ತ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದ್ದು, ಮುಂದೆಯೂ ಇಂತಹ ಸಾಮಾಜಿಕ ಮತ್ತು ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದೆ.