ಸುಳ್ಯ, ಜೂ. 04 (DaijiworldNews/TA): ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಹಿನ್ನೆಲೆಯಲ್ಲಿ ಅವರ ಮುಂದಿನ ರಾಜಕೀಯ ಜೀವನ ಹಾಗೂ ಸಿಎಂ ಆಗಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಮಳೆ ಬೆಳೆ ಸಮೃದ್ಧಿಯಾಗಿ , ಯಾವುದೇ ವಿರೋಧ ವ್ಯಕ್ತವಾಗದೇ ಸುಭೀಕ್ಷೆಯಿಂದ ಆಡಳಿತ ಮಾಡುವಂತಾಗಲಿ ಎಂದು ಸುಳ್ಯ ಶ್ರೀ ಚೆನ್ನಕೇಶವ ದೇವಳದಲ್ಲಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವೆಂಕಪ್ಪ ಗೌಡ ಮಾತನಾಡಿದರು. ಸುಳ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಗೀತಾ ಕೋಲ್ಚಾರ್,ನಂದರಾಜ್ ಸಂಕೇಶ,ಭವಾನಿ ಶಂಕರ ಇತರರು ಉಪಸ್ಥಿತರಿದ್ದರು.