ಬಂಟ್ವಾಳ, ಮೇ. 31 (DaijiworldNews/TA) : ದ.ಕ.ಜಿಲ್ಲಾ ಕಾಂಗ್ರೇಸ್ ಆಶ್ರಯದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದ.ಕ ವತಿಯಿಂದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಹಕಾರದೊಂದಿಗೆ ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಕೈಬಿಡುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಆಡಳಿತ ಕಛೇರಿ ಎದುರುಗಡೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ನ್ಯಾಯವಾದಿ, ಕೆಪಿಸಿಸಿ ವಕ್ತಾರ ಮುರೊಳಿ ಸುಧೀರ್ ಕುಮಾರ್, ಬಿಜೆಪಿ ದೋಖಾ ಮಾಡಿರುವಂತಹದ್ದು ಕೇವಲ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಅಲ್ಲ ಇಡೀ ಭಾರತೀಯ ಸಮಾಜಕ್ಕೆ ದೋಖಾ ಮಾಡಿದೆ. ನೀಟ್ ಪರೀಕ್ಷೆಗೆ ಇವತ್ತು ಸುಮಾರು 38 ಜನ ಭವಿಷ್ಯದಲ್ಲಿ ದೇಶವನ್ನು ಕಟ್ಟುವ ಯುವ ಪ್ರಜೆಗಳು ಆತ್ಮಹತ್ಯೆಗೆ ಒಳಗಾಗಿದ್ದಾರೆ. ಆದ್ರೆ ನರೇಂದ್ರ ಮೋದಿಯವರಿಗೆ , ಬಿಜೆಪಿಯವರಿಗೆ ಸ್ವಲ್ಪ ಸ್ವಲ್ಪ ಸತ್ರೆ ಬೇಜಾರಿಲ್ಲ. ಅವರಿಗೆ ಇನ್ನೂ ಎಷ್ಟು ಸಾವು ಆಗ್ಬೇಕು ಅಂತ ಗೊತ್ತಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಸಚಿವ ಬಿ. ರಾಮಾನಾಥ ರೈ ಮಾತನಾಡಿದರು.ಪ್ರತಿಭಟನೆಯಲ್ಲಿ M.S ಮಹಮ್ಮದ್, ಬೇಬಿ ಕುಂದರ್, ಅಬ್ಬಾಸ್ ಅಲಿ, ಪದ್ಮಶೇಖರ್ ಜೈನ್, ಮಮತಾ ಗಟ್ಟಿ, ಬಾಲಕೃಷ್ಣ ಅಂಚನ್, ಶ್ಯಾಲೆಟ್ ಪಿಂಟೋ, ಶೈಲಜಾ ರಾಜೇಶ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಚಿತ್ತರಂಜನ್ ಶೆಟ್ಟಿ, ಬಾಲಕೃಷ್ಣ ಅಂಜನ್, ಜಿಲ್ಲೆಯ ಎಲ್ಲಾ ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಯ ಅಧ್ಯಕ್ಷರುಗಳು, ಸದಸ್ಯರುಗಳು, ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.