ಮಂಗಳೂರು, ಮೇ. 21 (DaijiworldNews/AK): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತಿ ಅರಿವು ಕೇಂದ್ರ ಎಕ್ಕಾರಿನಲ್ಲಿ ಮೇ 13 ರಿಂದ 15ರವರೆಗೆ ಬೇಸಿಗೆ ಶಿಬಿರ ನಡೆಯಿತು.



ಸಂತೋಷ್ ಆಳ್ವಾ ಉಪನ್ಯಾಸಕರು ಗೋವಿಂದಾಸ್ ಕಾಲೇಜು ಕಾರ್ಯಕ್ರಮವನ್ನು ಉದ್ಘಾಟಿಸಿ ಸಂವಹನ ಕೌಶಲ್ಯದ ಬಗ್ಗೆ ಮಕ್ಕಳಿಗೆ ತಿಳಿಸಿದರು . ಪ್ರಾಪ್ತಿ ತುಳಸಿ ಪ್ರಕಾಶ್ ರವರು ಪೇಪರ್ ಕ್ರಾಫ್ಟ್ ಹೇಳಿಕೊಟ್ಟರು ಶಿಬಿರದ ಎರಡನೆಯ ದಿನ ಕಾಂಚನ ಗಣೇಶ್ ಇವರು ಯೋಗ ತರಗತಿ ನಡೆಸಿದರು. ಭಾರತಿ ಶೆಟ್ಟಿ ಅವರು ಲಘು ಸಂಗೀತ ಅಭಿನಯ ಗೀತೆ ತಿಳಿಸಿಕೊಟ್ಟರು. ಉಷಾ ಅವರು ಹೂಕುಂಡ, ಮುಖವಾಡಗಳ ರಚನೆ ಮತ್ತು ಪ್ರೇರಣ ವೈಷ್ಣವಿಯವರು ಗೂಡು ದೀಪ ರಚನೆ ಹೇಳಿಕೊಟ್ಟರು.
ಮೂರನೇಯ ದಿನ ಸಮರೋಪದಂದು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಉದಯಚಂದ್ರ ಉಡುಪ ಅವರು ದೀಪ ಬೆಳಗಿಸಿ ಶಿಬಿರಾರ್ಥಿಗಳಿಗೆ ಭಾರತೀಯ ಸೇನೆಯ ಬಗ್ಗೆ ಮಾಹಿತಿ ನೀಡಿದರು. ಅಂಚೆ ಅಧಿಕಾರಿಯದ ಸುರೇಖಾ ರವರು ಅಂಚೆ ಇಲಾಖೆಯ ಮಾಹಿತಿಯನ್ನು ನೀಡಿದರು ಮೂರು ದಿನಗಳಲ್ಲಿಯೂ ಕ್ರಿಯಾತ್ಮಕ ಚಟುವಟಿಕೆಯನ್ನು ಗ್ರಂಥಪಾಲಕರಾದ ಹೇಮಲತಾ ಶರ್ಮ ರವರು ನಡೆಸಿಕೊಟ್ಟರು. ಮಕ್ಕಳು ಕ್ರಾಫ್ಟ್ ಬೇಲೂನು ತೋರಣ ಕಟ್ಟುವುದರ ಮೂಲಕ ಗ್ರಂಥಾಲಯವನ್ನು ಅಲಂಕರಿಸಿದರು.
ನಿಕಟ ಪೂರ್ವ ಅಧ್ಯಕ್ಷರಾದ ಪ್ರವೀಣ್ ಆಚಾರ್ಯರವರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಪ್ರಾರ್ಥನೆ ಶ್ರೀಮತಿ ಗೀತಾ ಶ್ರೀಮತಿಮ ಮತ ಮತ್ತು ಮಕ್ಕಳು ನೆರವೇರಿಸಿದರು. ಪ್ರಾಸ್ತಾವಿಕ ಮಾತು ಅಭಿವೃದಿ ಅಧಿಕಾರಿಗಳಾದ ಶ್ರೀ ರಾಜೇಂದ್ರ ಶೆಟ್ಟಿ ಎಂ ನಡೆಸಿಕೊಟ್ಟರು ಕಾರ್ಯಕ್ರಮದ ಸಂಯೋಜನೆ ಮತ್ತು ನಿರೂಪಣೆ ಗ್ರಂಥ ಪಾಲಕರಾದ ಶ್ರೀಮತಿ ಹೇಮಲತಾ ಶರ್ಮ ಮಾಡಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ವಿಕಣ್ಣನ್,ಸಂಜೀವಿನಿ ಒಕ್ಕೂಟದ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆ ಯಾರು ಮಕ್ಕಳ ಹೆತ್ತವರು ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.