ಕುಂದಾಪುರ,ಆ 26 (Daijiworld News/RD): ಬೈಕುಗಳೆರಡು ಪರಸ್ಪರ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಬ್ಬ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದರೆ ಮತ್ತೊಬ್ಬ ಸವಾರೆ ಗಂಭೀರ ಗಾಯಗೊಂಡ ಘಟನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೊಳಹಳ್ಳಿ ಶಾಲೆ ಸಮೀಪದ ಜಂಕ್ಷನ್ನಲ್ಲಿ ಭಾನುವಾರ ಸಂಜೆ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರನನ್ನು ಸ್ಥಳೀಯ ನಿವಾಸಿ ನಂದೀಶ್(26) ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಇನ್ನೊಂದು ಬೈಕ್ ಸವಾರೆಯನ್ನು ಸುಶ್ಮಿತಾ(32) ಎಂದು ಗುರುತಿಸಲಾಗಿದೆ.
ನಂದೀಶ ತನ್ನ ಬೈಕಿನಲ್ಲಿ ಕೋಟೇಶ್ವರ ಕಡೆಯಿಂದ ಹುಣ್ಸ್ಸೆಮಕ್ಕಿ ಕಡೆಗೆ ಪ್ರಯಾಣಿಸುತ್ತಿದ್ದ. ಸುಶ್ಮಿತಾ ಎಂಬಾಕೆ ತನ್ನ ಸ್ಕೂಟರ್ನಲ್ಲಿ ಜಪ್ತಿ ಒಳರಸ್ತೆಯಿಂದ ಕೋಟೇಶ್ವರ ಹುಣ್ಸೆಮಕ್ಕಿ ರಸ್ತೆಗೆ ಪ್ರವೇಶಿಸುತ್ತಿದ್ದ ಸಂದರ್ಭ ಎರಡೂ ಬೈಕುಗಳು ಅಪಘಾತಕ್ಕೀಡಾಗಿವೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಸುಶ್ಮಿತಾ ಮುಖಕ್ಕೆ ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.