ಮಂಗಳೂರುಏ. 27 (DaijiworldNews/AK): ಭರತ್ ಪೆಟ್ರೋಲಿಯಂ ಸಂಸ್ಥೆಯ ಭಾರತ್ಗ್ಯಾಸ್ ವಿತರಕರಾದ ಕಾಮಧೇನು ಗ್ಯಾಸ್ ಏಜೆನ್ಸೀಸ್ ಅವರ ಮೂಲಕ ಕದ್ರಿ ಮಾರ್ಕೆಟ್, ಮಲ್ಲಿಕಟ್ಟೆ, ಮಂಗಳೂರು ನಗರದಲ್ಲಿ ವಲಸೆ ಕಾರ್ಮಿಕರು, ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳಿಗಾಗಿ 5 ಕೆಜಿ FTL ಶಿಬಿರವನ್ನು ಆಯೋಜಿಸಲಾಯಿತು.


ಈ ಹೊಸ ಯೋಜನೆಗೆ ಹಲವರು ಸ್ಥಳಕ್ಕೆ ಆಗಮಿಸಿ ಆಸಕ್ತಿ ತೋರಿದರು. ಪ್ರದೇಶ ವ್ಯವಸ್ಥಾಪಕರಾದ ಸಂದೀಪ್ ಕುಮಾರ್ ರೈನಾ, ಹಿರಿಯ ಮಾರಾಟ ಅಧಿಕಾರಿಯಾದ ಅನಂತ ರಾವ್ ಮತ್ತು ವಿತರಕರಾದ ದಿನೇಶ್ ಶೆಟ್ಟಿ ಅವರು 5 ಕೆಜಿ FTL ಯೋಜನೆಯ ಲಾಭಗಳನ್ನು ಹಾಗೂ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಭಾರತ ಸರ್ಕಾರ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದರು. ಸ್ಥಳದಲ್ಲೇ ವಿವಿಧ ವಿಚಾರಣೆಗಳನ್ನೂ ನೋಂದಾಯಿಸಲಾಯಿತು.