ಮಂಗಳೂರು, ಏ. 19 (DaijiworldNews/TA): ನಗರದ ಕ್ಲಾಕ್ ಟವರ್ ಬಳಿಯ ಸೆಂಟ್ರಲ್ ಸ್ಕ್ವೇರ್ ಕಟ್ಟಡದಲ್ಲಿರುವ ಚೆಮ್ಮನೂರ್ ಇಂಟರ್ನ್ಯಾಷನಲ್ ಜ್ಯುವೆಲರ್ಸ್ ಶೋರೂಮ್ನಲ್ಲಿ ಅಕ್ಷಯ ತೃತೀಯ ವಿಶೇಷ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ಶೋರೂಮ್ನಲ್ಲಿ ನೆರವೇರಿತು.




























ಕಾರ್ಯಕ್ರಮಕ್ಕೆ ಸಂಸ್ಥೆಯ ಸೇಲ್ಸ್ ರೀಜಿನಲ್ ಮ್ಯಾನೇಜರ್ ಜಾರ್ಜ್, ಮಾರ್ಕೆಟಿಂಗ್ ರೀಜಿನಲ್ ಮ್ಯಾನೇಜರ್ ಅನೀಶ್, ರೀಜಿನಲ್ ಮ್ಯಾನೇಜರ್ ಜಯಪ್ರಕಾಶ್, ಶೋರೂಮ್ ಮ್ಯಾನೇಜರ್ ವಿಶಾಖ್ ವೇಣು ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಕಿರಾನ್ ಡೇನಿಯಲ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಸೇಲ್ಸ್ ರೀಜಿನಲ್ ಮ್ಯಾನೇಜರ್ ಜಾರ್ಜ್ ಅವರು, ಅಕ್ಷಯ ತೃತೀಯದ ಅಂಗವಾಗಿ ಗ್ರಾಹಕರಿಗಾಗಿ ಹಲವು ಆಕರ್ಷಕ ಆಫರ್ಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
ಬಂಗಾರ ಖರೀದಿಗೆ ಕೇವಲ 2.9% ಮೇಕಿಂಗ್ ಚಾರ್ಜ್, ಡೈಮಂಡ್ ಖರೀದಿಗೆ 50% ರಿಯಾಯಿತಿ, ರೂ.3 ಲಕ್ಷ ಹಾಗೂ ಅದಕ್ಕೂ ಹೆಚ್ಚು ಡೈಮಂಡ್ ಖರೀದಿಗೆ ಉಚಿತ ಗೋಲ್ಡ್ ಕಾಯಿನ್, ರೂ.5 ಲಕ್ಷ ಹಾಗೂ ಅದಕ್ಕೂ ಹೆಚ್ಚಿನ ಅನ್ಕಟ್ ಮತ್ತು ಪ್ರೆಷಿಯಸ್ ಖರೀದಿಗೆ ವಿಶೇಷ ಗೋಲ್ಡ್ ಕಾಯಿನ್ ಸೇರಿದಂತೆ ಪ್ರತಿಯೊಂದು ಖರೀದಿಗೂ ಆಕರ್ಷಕ ಉಡುಗೊರೆಗಳನ್ನು ನೀಡಲಾಗುತ್ತಿದೆ ಎಂದರು. ಈ ಸುವರ್ಣಾವಕಾಶವನ್ನು ಮಂಗಳೂರು ಭಾಗದ ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ಗಳಾದ ಮಿನಿ ನಾಯರ್, ನೌಶಿನಾ, ಸಬೀನಾ, ನಹೀದ ಬಾನು, ಮುಮ್ತಾಜ್, ಪೂರ್ಣಿಮಾ, ಸೈನಾಜ್, ಮುಖ್ತಾರ್, ಹನೀಫ್, ಉಷಾ ಸೇರಿದಂತೆ ಅನೇಕ ಸಿಬ್ಬಂದಿಗಳು ಹಾಗೂ ಆಹ್ವಾನಿತರು ಉಪಸ್ಥಿತರಿದ್ದರು.