ಸುಳ್ಯ, ಏ. 19 (DaijiworldNews/TA): ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಕಾಲಾವಧಿ ಜಾತ್ರೋತ್ಸವದ ಪ್ರಯಕ್ತ ಶ್ರೀ ದೇವರ ದೊಡ್ಡ ದರ್ಶನ ಬಲಿ ಏ.18ರಂದು ಬೆಳಿಗ್ಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಆರ್ಥಿಕ ಸಮಿತಿ ಅಧ್ಯಕ್ಷ ಕಿಶೋರ್ ಉಳುವಾರು, ಹಸಿರುವಾಣಿ ಸಂಚಾಲಕ ಕೇಶವ ಅಡ್ತಲೆ, ಅವಿನ್ ರಂಗತ್ತಮಲೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕ್ರಷ್ಣ ಕೆ.ಕೆ ಕುಂಟುಕಾಡು,ವಸಂತ ಪೆಲ್ತಡ್ಕ, ಸೇರಿದಂತೆ ಇತರ ಪ್ರಮುಖರು ಹಾಜರಿದ್ದರು. ಈ ವರ್ಷ ದೊಡ್ಡ ದರ್ಶನ ಬಲಿಗೆ ಪುತ್ತೂರು ತಾಲೂಕಿನ ಕೆಮ್ಮಿಂಜೆ ದೇವಳದ ಬಸವ (ಸುಬ್ಬ) ವಿಶೇಷ ಆಕರ್ಷಣೆಯಾಗಿತ್ತು.