ಕಾರ್ಕಳ, ಏ. 14 (DaijiworldNews/AK): ನಿಟ್ಟೆ ಗ್ರಾಮದ ಬೋರ್ಕಲ್ಲುಗುಡ್ಡೆ ಪ್ರದೇಶದಲ್ಲಿ ಬಾವಿಗೆ ಬಿದ್ದಿದ್ದ ಚಿರತೆಯನ್ನ ರಕ್ಷಿಸಿ ಕಾಡಿಗೆ ಬಿಟ್ಟ ಘಟನೆ ನಿಟ್ಟೆ ಗ್ರಾಮದ ಬೋರ್ಕಲ್ಲುಗುಡ್ಡೆ ಪ್ರದೇಶದಲ್ಲಿ ನಡೆದಿದೆ.
.jpg)
.jpg)
ಕರಿಯ ಪೂಜಾರಿ ಎಂಬವರ ಮನೆಯ ಸಮೀಪವಿರುವ ಕೃಷಿ ಹೊಲಗಳಿಗೆ ಬೇಟೆಯನ್ನು ಹುಡುಕುತ್ತಾ ಹೋದ ಚಿರತೆ, ನಂತರ ಆಕಸ್ಮಿಕವಾಗಿ ಮನೆಯ ಸಮೀಪವಿರುವ ತೆರೆದ ಬಾವಿಗೆ ಬಿದ್ದಿದ್ದೆ.
ಬೆಳಿಗ್ಗೆ ಸ್ಥಳೀಯ ನಿವಾಸಿಗಳು ಅದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ, ಬಲೆಗಳು ಮತ್ತು ಪಂಜರವನ್ನು ಬಳಸಿ ಚಿರತೆಯನ್ನು ಬಾವಿಯಿಂದ ಸುರಕ್ಷಿತವಾಗಿ ಹೊರತೆಗೆಯಲಾಯಿತು. ಯಾವುದೇ ಗಾಯಗಳಿಲ್ಲದೆ ಚಿರತೆಯನ್ನು ರಕ್ಷಿಸಿ ನಂತರ ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದರು.
ಅರಣ್ಯ ಅಧಿಕಾರಿಗಳು ಆ ಪ್ರಾಣಿಯನ್ನು ಸುಮಾರು ಒಂದು ವರ್ಷದ ಗಂಡು ಚಿರತೆ ಎಂದು ಗುರುತಿಸಿದ್ದಾರೆ.
ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್ ಮತ್ತು ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ರಕ್ಷಣಾ ತಂಡದಲ್ಲಿ ಕಾರ್ಕಳ ವಲಯ ಉಪ ಅರಣ್ಯಾಧಿಕಾರಿ ಹುಕ್ರಪ್ಪ ನೇತೃತ್ವದ ಸಿಬ್ಬಂದಿ, ಚಂದ್ರಕಾಂತ್, ಕರುಣಾಕರ್, ಅರಣ್ಯ ರಕ್ಷಕರಾದ ಸುರೇಶ್, ಪ್ರಕಾಶ್, ಶ್ರೀಧರ್, ಯಮನೂರ್, ಅರಣ್ಯ ವೀಕ್ಷಕ ಮಂಜುನಾಥ್, ಚಾಲಕ ವಿತೇಶ್ ಮತ್ತು ಇತರ ಸಿಬ್ಬಂದಿ ಇದ್ದರು, ಸ್ಥಳೀಯ ನಿವಾಸಿಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಿದ್ದಾರೆ.