ಕಾಸರಗೋಡು, ಏ. 06 (DaijiworldNews/TA): ಮಂಜೇಶ್ವರಕ್ಕೆ ಬಂದಾಗ ಕರ್ನಾಟದಲ್ಲಿ ಇದ್ದೀನಿ ಎನ್ನುವ ಭಾವನೆಯಾಗುತ್ತದೆ. 1956ರಲ್ಲಿ ಕಾಸರಗೋಡು ಜಿಲ್ಲೆ ಕೇರಳಕ್ಕೆ ಸೇರಿತ್ತು. ಆದರೆ ಕರ್ನಾಟಕದಲ್ಲೇ ಇರಬೇಕಿತ್ತು ಎನ್ನುವುದು ನನ್ನ ಭಾವನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಜೇಶ್ವರ ಸಮೀಪದ ವರ್ಕಾಡಿ ಮಜೀರ್ ಪಳ್ಳ ದಲ್ಲಿ UDF ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಅವರ ಪರ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಮಹಾನ್ ಸಾಹಿತಿ . ಕಯ್ಯಾರ ಕಿಞ್ಞಣ್ಣ ರೈ ಕೂಡ ಈ ಭಾಗದವರೇ. ಕೇರಳದಲ್ಲಿ ಇದ್ದರೂ ಕೂಡ ಕರ್ನಾಟಕದಲ್ಲಿ ಕನ್ನಡದಲ್ಲಿ ಮಾತನಾಡಿ, ಕನ್ನಡ ಕಲಿತು ಭಾಷೆಯ ಸೂಕ್ಷ್ಮತೆ ಉಳಿಸಿರುವುದು ಸಂತೊಷದ ವಿಚಾರ ಎಂದು ಅವರು ತಿಳಿಸಿದರು.