ಉಡುಪಿ, ಏ. 06 (DaijiworldNews/TA): ಪರ್ಕಳದಲ್ಲಿನ ನಗರಸಭೆ ಉಪಕಚೇರಿ ಮುಂಭಾಗದ 1ನೇ ಅಡ್ಡರಸ್ತೆಯ ಮನೆ ಅಂಗಳದಲ್ಲಿರುವ ತೆಂಗಿನಮರಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ತೆಂಗಿನ ಕಾಯಿಗಳು ಉರಿದು ಹೊಗೆಯಾಡಿದ ಘಟನೆ ನಿನ್ನೆ ಸಂಭವಿಸಿದೆ.

2ನೇ ಅಡ್ಡರಸ್ತೆಯಲ್ಲಿ ಕಾಂಪೌಂಡ್ ಒಳಗೆ ಬೆಂಕಿ ಹಚ್ಚಲಾಗಿದ್ದು, ಗಾಳಿಯ ವೇಗಕ್ಕೆ ಬೆಂಕಿ ಕಿಡಿ ಹಾರಿ ಶೇಷಗಿರಿ ಶೆಣೈ ಅವರ ತೆಂಗಿನಮರದ ತುದಿಗೆ ತಗಲಿತ್ತು. ಕ್ರಮೇಣ ಮರದಲ್ಲಿ ಬೆಂಕಿ ಕಾಣಿಸಿಕೊಂಡು ತೆಂಗಿನ ಕಾಯಿಗಳು ಉರಿದು ಹೊಗೆಯಾಡಲಾರಂಭಿಸಿತು. ಇದನ್ನು ಶೇಷಗಿರಿ ಶೆಣೈ ಅವರ ಪತ್ನಿ ಗಮನಿಸಿದ್ದು, ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬಂದಿ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.