ಕಾಸರಗೋಡು, ಮಾ. 26 (DaijiworldNews/TA): ನಿಯಂತ್ರಣ ತಪ್ಪಿದ ಓಮ್ನಿ ವ್ಯಾನ್ ರಸ್ತೆ ಬದಿಯ ಮರಕ್ಕೆ ಬಡಿದು 12 ಅಡಿ ಆಳದ ಹೊಂಡಕ್ಕೆ ಬಿದ್ದ ಘಟನೆ ಕಾಸರಗೋಡು ಬದಿಯಡ್ಕ ಸಮೀಪದ ನವಕಾನ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ವಿದ್ಯಾಗಿರಿ ಬಜೆಯ ಸತ್ಯನಾರಾಯಣ ಭಟ್ ( 69) ಗಾಯಗೊಂಡಿದ್ದಾರೆ.


ತಪಾಸಣೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ. ಸ್ಥಳೀಯರು ಗಮನಿಸಿ ಸತ್ಯನಾರಾಯಣ ಭಟ್ ಅವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರು. ಘಟನಾ ಸ್ಥಳಕ್ಕೆ ತಲಪಿದ ಅಗ್ನಿಶಾಮಕ ದಳದ ಸಿಬ್ಬಂದಿ ಜೆಸಿಬಿ ಮೂಲಕ ವ್ಯಾನನ್ನು ಮೇಲಕ್ಕೆತ್ತಿದರು.