ಮಂಗಳೂರು, ಮಾ. 26 (DaijiworldNews/TA): ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ಹೊಸ ದಿಕ್ಕಿನತ್ತ ಸಾಗುತ್ತಿರುವ ಮೈಜಿ ಫ್ಯೂಚರ್-ದಿ ಗೇಮ್ ಚೇಂಜರ್ ನ ನೂತನ ಶೋ ರೂಂ ಅನ್ನು ಗುರುವಾರ ಮಂಗಳೂರಿನ ಫಳ್ನೀರ್ ನಲ್ಲಿ ಖ್ಯಾತ ಚಲನಚಿತ್ರ ನಟ, ನಿರ್ಮಾಪಕ ಮತ್ತು ನಿರ್ದೇಶಕ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರು ಉದ್ಘಾಟಿಸಿದರು.









ಮೈಜಿಯ ಕೇರಳದ ಹೊರಗಿನ ಮೊದಲ ಶೋರೂಮ್ ನಮ್ಮ ಮಂಗಳೂರಿನಲ್ಲಿ ಪ್ರಾರಂಭವಾಗಿರುವುದಕ್ಕೆ ಬಹಳ ಸಂತೋಷವಾಗಿದೆ. ಕರ್ನಾಟಕದಾದ್ಯಂತ ಇನ್ನೂ ಅನೇಕ ಶೋರೂಮ್ಗಳು ತೆರೆಯಬೇಕೆಂದು ರಿಷಬ್ ಶೆಟ್ಟಿ ಶುಭ ಹಾರೈಸಿದರು. ಮೈಜಿ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷ ಎ.ಕೆ. ಶಾಜಿ ಮಾತನಾಡಿ, ಮೈಜಿ ಫ್ಯೂಚರ್ ಮೂಲಕ ಕರ್ನಾಟಕಕ್ಕೆ ನಮ್ಮ ಸೇವೆಯನ್ನು ವಿಸ್ತರಿಸಲು ಮಂಗಳೂರು ಅತ್ಯಂತ ಪ್ರಶಸ್ತವಾದ ತಾಣವಾಗಿದೆ. ಕೇವಲ ವ್ಯಾಪಾರವಲ್ಲದೆ, ಆಧುನಿಕ ತಂತ್ರಜ್ಞಾನವನ್ನು ಸಾಮಾನ್ಯ ಗ್ರಾಹಕರಿಗೂ ಸುಲಭವಾಗಿ ತಲುಪಿಸುವುದು ಮತ್ತು ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುವುದು ನಮ್ಮ ಪ್ರಮುಖ ಆಶಯ ಎಂದು ತಿಳಿಸಿದರು.
ನಟ ಸ್ವರಾಜ್ ಶೆಟ್ಟಿ,ಮೈಜಿ ಇಂಡಿಯಾ ಪ್ರೈ.ಲಿ. ಅಧ್ಯಕ್ಷ ಎ.ಕೆ.ಶಾಜಿ ಸೇರಿ ಗಣ್ಯರು ಉಪಸ್ಥಿತರಿದ್ದರು. ಮಳಿಗೆ ಉದ್ಘಾಟನೆಗೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆದವು. 25,000 ಚದರ ಅಡಿ ವಿಸ್ತೀರ್ಣದಲ್ಲಿರುವ ನೂತನ ಶೋ ರೂಂ, ಪ್ರಮುಖ ಬ್ರ್ಯಾಂಡ್ಗಳ ವ್ಯಾಪಕ ಶ್ರೇಣಿಯ ತಂತ್ರಜ್ಞಾನ ಉತ್ಪನ್ನಗಳನ್ನು ಒಳಗೊಂಡಿದೆ. ಶಾಪಿಂಗ್ ಅನುಭವವನ್ನು ಹೆಚ್ಚಿಸುವ ಮತ್ತು ಒಂದೇ ಸೂರಿನಡಿ ಬಹು ಉತ್ಪನ್ನ ಆಯ್ಕೆ ಹೊಂದಿರುವ ಈ ಮಳಿಗೆಯನ್ನು ಭವಿಷ್ಯಕ್ಕೆ ಸಿದ್ಧವಾದ ಅತ್ಯುತ್ತಮ ಸ್ಥಳವಾಗಿ ವಿನ್ಯಾಸಗೊಳಿಸಲಾಗಿದೆ.
ನಗರದಲ್ಲಿ ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಹೊಸ ಸ್ವರೂಪವನ್ನು ಪರಿಚಯಿಸುವ ನಿರೀಕ್ಷೆ ಮೂಡಿಸಿದೆ. ತಂತ್ರಜ್ಞಾನ, ಉತ್ಪನ್ನ ವೈವಿಧ್ಯತೆ ಮತ್ತು ಗ್ರಾಹಕರ ತೊಡಗಿಸಿಕೊಳ್ಳುವಿಕೆಯ ಮೇಲೆ ಕೇಂದ್ರೀಕರಿಸಲಿದೆ. ಭಾರತದಾದ್ಯಂತ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ಮೈಜಿಯ ಜಾಲವು ಈಗಾಗಲೇ 150ಕ್ಕೂ ಹೆಚ್ಚು ಶೋರೂಮ್ ಗಳನ್ನು ಹೊಂದಿದೆ.