ಮಂಗಳೂರು, ಮಾ. 24 (DaijiworldNews/TA): ಕದ್ರಿ ಪಾರ್ಕ್ ಉದ್ಯಾನವನದ ಸುತ್ತಮುತ್ತ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಹೊರ ಭಾಗದ ಅಂಗಡಿಗಳಲ್ಲಿ ವಿವಿಧ ಮಳಿಗೆಗಳು ಕಾರ್ಯಾಚರಿಸುತ್ತಿವೆ. ವಾಹನ ನಿಲುಗಡೆ ಮಾಡುವವರಿಗೆ ಪೇ ಪಾರ್ಕಿಂಗ್ ಮಾಡಲಾಗಿದೆ. ಆದರೆ, ಪಾರ್ಕ್ ಬಳಿ ಸ್ಮಾರ್ಟ್ ಸಿಟಿಯ ಮೂಲಕ ನಿರ್ಮಾಣ ಮಾಡಲಾದ ಶೌಚಾಲಯಗಳು ಇನ್ನೂ ಕಾರ್ಯಾರ೦ಭಗೊಂಡಿಲ್ಲ.


ಮಳಿಗೆಗಳು ಆರಂಭಗೊಂಡು ಹಲವು ತಿಂಗಳು ಕಳೆದರೂ ಗ್ರಾಹಕರಿಗೆ ಉಪಯೋಗಿಸಲು ಶೌಚಾಲಯವಿಲ್ಲದಂತಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿ ಕೆಲಸಕಾರ್ಯಗಳು ನಡೆದಿವೆ. ಜಿಲ್ಲೆ, ನೆರೆ ರಾಜ್ಯದ ಜನ ಕದ್ರಿಗೆ ಆಗಮಿಸುತ್ತಾರೆ. ಬೆಳಗ್ಗೆ ಹಾಗೂ ಸಂಜೆ ಹಿರಿಯ ನಾಗರಿಕರು ಸಹಿತ ನೂರಾರು ಮಂದಿ ವಾಕಿಂಗ್ ಮಾಡುತ್ತಾರೆ.
ಫೋಟೊ ಶೂಟ್ ಗಳು ನಡೆಯುತ್ತವೆ. ಇದರೊಂದಿಗೆ ಪಾರ್ಕ್ಗೆ ಆಗಮಿಸುವವರಿಂದ ಪಾರ್ಕಿಂಗ್ ಚಾರ್ಜ್ ಕೂಡ ವಸೂಲು ಮಾಡಲಾಗುತ್ತದೆ. ಇಷ್ಟೆಲ್ಲ ಇದ್ದರೂ, ಪಾರ್ಕ್ ಹೊರ ಭಾಗದಲ್ಲಿರುವ ಶೌಚಾಲಯವನ್ನು ಸಾರ್ವಜನಿಕ ಬಳಕೆಗೆ ಮುಕ್ತವಾಗಿಸಿಲ್ಲ. ಎಂಬ ಆರೋಪ ನಾಗರಿಕರದ್ದು.