ಉಡುಪಿ, ಮಾ. 15 (DaijiworldNews/TA): ಜಿಲ್ಲೆಯ ಹೆಬ್ರಿ ಹಾಗೂ ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆಯ ವೇಳೆ ಸಾಧಾರಣ ಮಳೆಯಾಗಿದ್ದು, ಇದರಿಂದ ಪರಿಸರದಲ್ಲಿ ತಂಪಿನ ವಾತಾವರಣ ನಿರ್ಮಾಣವಾಗಿದೆ.

ಕಾರ್ಕಳ ತಾಲೂಕಿನ ಕಾರ್ಕಳ ನಗರ, ಮಾಳ, ಅಜೆಕಾರು, ಶಿರ್ಲಾಲು, ಬೆಳ್ಮಣ್, ಬಜೆಗೋಳಿ, ಹೆಬ್ರಿ ಸಮೀಪದ ಮುನಿಯಾಲು, ಅಂಡಾರು ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಿಸಿಲ ತಾಪದಿಂದ ತತ್ತರಿಸಿದ ಜನತೆಗೆ ಈ ಮಳೆ ತಂಪಿನ ವಾತಾವರಣ ಕಲ್ಪಿಸಿದೆ. ಮಳೆಯಿಂದಾಗಿ ಕೆಲವು ಕಡೆ ವಾಹನ ಸವಾರರರು ತೀರಾ ತೊಂದರೆ ಅನುಭವಿಸುವಂತಾಯಿತು.