ಪುತ್ತೂರು, ಮಾ. 13 (DaijiworldNews/AA): ನಾಲ್ಕು ದ್ವಿಚಕ್ರ ವಾಹನಗಳಿಗೆ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ವಾಹನ ಚಾಲಕ ಅಪ್ರಾಪ್ತ ಬಾಲಕನ ತಾಯಿ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ. 12 ರಂದು ನಾಲ್ಕು ದ್ವಿಚಕ್ರ ವಾಹನಗಳಿಗೆ ಕಾರೊಂದು ಢಿಕ್ಕಿಪಡಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ:42/2026, ಕಲಂ: 281, 125(ಎ) ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಕಲಂ: 134(ಎ&ಬಿ) ಐಎಂವಿ ಕಾಯಿದೆಯಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕಾರಿನ ಚಾಲಕನು ಅಪ್ರಾಪ್ತನಾಗಿರುವ ಹಿನ್ನೆಲೆ ವಾಹನದ ಮಾಲಿಕರಾದ ಅಪ್ರಾಪ್ತ ಬಾಲಕನ ತಾಯಿ ಪುತ್ತೂರು ನಿವಾಸಿ ಕೆ ಎ ಮಮತಾಜ್ (42) ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.