ಕಾಸರಗೋಡು, ಮಾರ್ಚ್ 12 (DaijiworldNews/TA): ಜಿಲ್ಲೆಯ ಚೆಂಗಳ ಗ್ರಾಮ ಪಂಚಾಯಿತಿಯ ಮೊದಲ ವಾರ್ಡ್ನ ಮೀನಾಡಿ ಪಲ್ಲ ಯಮುನಾ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬಿ.ಸಿ. ಟ್ರಸ್ಟ್, ಕಾಸರಗೋಡು ವತಿಯಿಂದ ಮಂಜೂರಾದ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.

ಈ ಕಾರ್ಯಕ್ರಮ ಕಾಸರಗೋಡು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗಮಗಂ ಅಧ್ಯಕ್ಷತೆಯಲ್ಲಿ ನಡೆಯಿತು. ಮನೆ ನಾಮಫಲಕ ಅನಾವರಣವನ್ನು ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು ನೆರವೇರಿಸಿದರು. ಬಳಿಕ ದಕ್ಷಿಣ ಕನ್ನಡ -2 ಜಿಲ್ಲೆ ಮಾನ್ಯ ನಿರ್ದೇಶಕ ಬಾಬು ನಾಯ್ಕ ಫಲ ಪುಷ್ಪದೊಂದಿಗೆ ಮನೆ ಕೀ ಹಸ್ತಾಂತರ ಮಾಡಿದರು.
ಕಾರ್ಯಕ್ರಮದಲ್ಲಿ ಜನಜಾಗೃತಿ ಸದಸ್ಯರಾದ ನವೀನ್ ಭಟ್, ಬದಿಯಡ್ಕ ಪಂಚಾಯತ್ ಸದಸ್ಯ ಶ್ಯಾಮ್ ಪ್ರಸಾದ್, ತಾಲೂಕಿನ ಯೋಜನಾ ಅಧಿಕಾರಿಗಳಾದ ದಿನೇಶ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸೌಮ್ಯ ಗಿರೀಶ್, ಕಾರ್ಯಕ್ಷೇತ್ರ ಸೇವಾ ಪ್ರತಿನಿಧಿಗಳು ಹೇಮಲತಾ ಎಡನೀರು ಮತ್ತು ರಾಜೀವಿ, ಮಾನ್ಯ ಒಕ್ಕೂಟದ ಅಧ್ಯಕ್ಷ ಸುನಿಲ್ ಹಾಗೂ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.