ಗಂಗೊಳ್ಳಿ,ಫೆ. 19 (DaijiworldNews/TA): ಮರವಂತೆ ಯೂ ಟರ್ನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕೊಂದು ಕಂಟೈನರ್ ಲಾರಿಯ ಚಕ್ರದಡಿಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಜೈರಾಮ ಬೈರು ಕಾತ್ರೋಟ ಎಂದು ಗುರುತಿಸಲಾಗಿದೆ.

ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಲಾರಿಯ ಹಿಂದುಗಡೆಯಿಂದ ಬೈಕ್ ಬಂದಿದೆ. ಮುಂದೆ ಹೋಗುತ್ತಿದ್ದಾಗ ಬೈಕ್, ಲಾರಿಯ ಹಿಂದಿನ ಟಯರ್ಗೆ ತಾಗಿತ್ತೆನ್ನಲಾಗಿದೆ. ಇದರಿಂದ ಬೈಕ್ ರಸ್ತೆಗೆ ಬಿದ್ದು, ಸವಾರ ಲಾರಿಯ ಹಿಂಬದಿಯ ಚಕ್ರದಡಿ ಸಿಲುಕಿ ಕೊಂಡರು.
ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.