ಉಡುಪಿ, ಫೆ. 16 (DaijiworldNews/TA): ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ, ಶ್ರೀ ಮಹಾ ವಿಷ್ಣು ಮೂರ್ತಿ ದೇವಸ್ಥಾನ ಉದ್ಯಾವರ ಕೇದಾರದಲ್ಲಿ ಮಹಾ ಶಿವರಾತ್ರಿ ಉತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಫೆಬ್ರವರಿ 17ರಂದು ನಡೆಯಲಿದೆ.

ಶ್ರೀ ಹರಿಹರ ಪುಣ್ಯಕ್ಷೇತ್ರ ಹಾಗೂ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯ ಅಧೀನ ಒಳಪಟ್ಟ ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇದರ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ವಿದ್ವಾನ್ ಶ್ರೀ ಕೆ ಎಸ್ ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಸೋಮವಾರ ದೇವಸ್ಥಾನದ ಆವರಣದಲ್ಲಿರುವ ನಾಗಬನದಲ್ಲಿ ನಾಗದೇವರಿಗೆ ನವಕ ಪ್ರಧಾನ ಹೋಮ, ನಾಗದೇವರಿಗೆ ಆಶ್ಲೇಷ ಬಲಿ ಶ್ರೀ ದೇವರಿಗೆ 108 ಶಿಯಾಳ ಅಭಿಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಂಗಳವಾರದಂದು ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ದೇವರಿಗೆ ಕಲಶಾಭಿಷೇಕ ಮಹಾ ರುದ್ರಾಯಾಗ ಮಹಾ ವಿಷ್ಣು ಸಹಸ್ರನಾಮ ಹೋಮ ಸೇರಿದಂತೆ ಅನ್ನಸಂತಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೂಡ ನಡೆಯಲಿದೆ.
ಶ್ರೀ ಬ್ರಹ್ಮೇಶ್ವರ ಮಹಾಲಿಂಗೇಶ್ವರ,ಶ್ರೀ ಮಹಾ ವಿಷ್ಣು ಮೂರ್ತಿ ದೇವಸ್ಥಾನ ದೇವಸ್ಥಾನ ಇತಿಹಾಸ ಪ್ರಸಿದ್ಧವಾಗಿದ್ದು ಅನೇಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಪ್ರಸಾದವನ್ನು ಸ್ವಿಕರಿಸಿದರು. ಬುಧವಾರದಂದು ಮಹಾ ಮಂತ್ರಾಕ್ಷತೆ ಕಾರ್ಯಕ್ರಮ ಕೂಡ ನಡೆಯಲಿದ್ದು ದೇವಸ್ಥಾನ ಆಡಳಿತ ಮಂಡಳಿ ನೂತನ ಕೆರೆ,,ಶ್ರೀ ದೇವರಿಗೆ ನೂತನ ಚಂದ್ರಮಂಡಲ ರಥ,,ಸುತ್ತುಪೌಳಿಯ ಒಳಗೆ ನೈರುತ್ಯ ದಿಕ್ಕಿನಲ್ಲಿ ಗಣಪತಿ ಗುಡಿ ನಿರ್ಮಾಣ,,ಶ್ರೀ ಕ್ಷೆತ್ರದಲ್ಲಿ ನಡೆಯುವ ಅನ್ನದಾನಕ್ಕೆ ಶಾಶ್ವತ ನಿಧಿಯ ಮುಂದಿನ ದಿನಗಳಲ್ಲಿ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ವಿದ್ವಾನ್ ಕೆ ಎಸ್ ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ,, ಪ್ರಧಾನ ಅರ್ಚಕರಾದ ಸುಧೀಂದ್ರ ಉಪಾಧ್ಯ ಹಾಗೂ ಅರ್ಚ ವೃಂದ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತಿನ್ ಜೆ ಸಾಲಿಯಾನ್, ವ್ಯವಸ್ಥಾಪನಾ ಸಮಿತಿ ಸದಸ್ಯ ಸುಧಾಕರ್ ಕುಮಾರ್, ಗಿರಿಧರ ಗಾಣಿಗ, ಸತೀಶ್ ಡಿ ಸಾಲಿಯಾನ್, ಶ್ರೀ ಕುಮಾರ್, ಶೇಖರ ಕೋಟ್ಯಾನ್ , ಅಮೃತ,ಪೂಜಾರಿ, ಗೀತಾ ಎಮ್ ಆಚಾರ್ಯ, ಮತ್ತಿತರ ಸದಸ್ಯರು, ಊರಿನ ಸದಸ್ಯರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.